ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಭಿವೃದ್ಧಿ ಹರಿಕಾರ ಅಂತ ನಮ್ಮ ಕ್ಷೇತ್ರದ ಶಾಸಕರನ್ನು ಹೇಳಿದರೆ ತಪ್ಪಾಗಲಾರದು ಹಲವಾರು ಅಭಿವೃದ್ಧಿಗಳ ಯೋಜನೆಯಲ್ಲಿ ನಮ್ಮ ತಾಲೂಕಿಗೆ ಶೀಘ್ರವಾಗಿ ಅನುದಾನವನ್ನು ಬಿಡುಗಡೆ ಮಾಡಿ ಕೆಲಸಗಳು ಕಾರ್ಯರೂಪಕ್ಕೆ ತಂದು ಇನ್ನು ತರಬೇಕಾದಂತಹ ಇನ್ನೂ ಹಲವಾರು ಕಾಮಗಾರಿಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳ ಸರಿಯಾದ ಕಾಲಕ್ಕೆ ಕಾರ್ಯರೂಪಕ್ಕೆ ತರಬೇಕೆಂದು ಹೇಳುತ್ತಾ ಇಂದು ಕೂಡ್ಲಿಗಿಯಲ್ಲಿ
1)ಕೂಡ್ಲಿಗಿ ಪಟ್ಟಣದ ಉಡಿಸಲಮ್ಮ ಕಟ್ಟೆ ಕೆರೆ ಅಭಿವೃದ್ಧಿ(1ಕೋಟಿ ವೆಚ್ಚ )
2) ಹೌಸಿಂಗ್ ಕಾಲೋನಿಯಲ್ಲಿ ಉದ್ಯಾನವನ ಅಭಿವೃದ್ಧಿ (1ಕೋಟಿ ವೆಚ್ಚ) ಕಾಮಗಾರಿ ಭೂಮಿ ಪೂಜೆ ನೆರವೇರಿಸಿದೆ ಕೆರೆ ಮತ್ತು ಉದ್ಯಾನವನ ಕೂಡ್ಲಿಗಿ ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಕೂಡ್ಲಿಗಿ ಜನತೆಯ ಬಹು ನಿರೀಕ್ಷಿತ, ಬಹು ಜನತೆಯ ಬೇಡಿಕೆಯಾಗಿತ್ತು. ಆದ್ದರಿಂದ ಉದ್ಯಾನವನಗಳು ಒಣಗಿ ಅಂದವನ್ನೂ ಕಳೆದುಕೊಂಡಿವೆ. ಆಯಾಸವನ್ನು ಕಳೆಯಲು ಹಸಿರು ವಾತಾವರಣ ಸೃಷ್ಟಿಸಿ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಸಾಮಾನುಗಳು, ವಿದ್ಯುತ್ ದೀಪ ವ್ಯವಸ್ಥೆ,ವಾಯು ವಿಹಾರ ಮಾಡುವವರಿಗೆ ಎಲ್ಲಾ ಸೌಕರ್ಯಗಳನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಈ ಅನುದಾನ ಸಾಕಾಗುವುದಿಲ್ಲ ವಿಸ್ತೃತ ಅಂದಾಜು ಪಟ್ಟಿಯನ್ನು ಹೆಚ್ಚಿನ ಅನುದಾನವನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಪ. ಪಂ.ಅಧ್ಯಕ್ಷರು ಕಾವಲಿ ಶಿವಣ್ಣನವರು, ಉಪಾಧ್ಯಕ್ಷರು ಲೀಲಾವತಿ ಪ್ರಭಾಕರ್ ರವರು, ಸದಸ್ಯರಾದ ತಳವಾಸ್ ವೆಂಕಟೇಶ್, ಶೂಕುರ್, ಈಶಪ್ಪ, ಜಯಮ್ಮರು ರಾಘವೇಂದ್ರ, ಸಿರಿಬಿ ಮಂಜುನಾಥ, ರಾಘವೇಂದ್ರ, ಭಾಷ ನಾಯ್ಕ, ಪೂರ್ಯ ನಾಯ್ಕ್, ಪ್ರಮುಖ ಮುಖಂಡರಾದ ಉದಯ ಜನ್ನು, ಉಮೇಶಪ್ಪ, ದುರ್ಗೇಶ್, ಸುರೇಶ್, ಓಬಣ್ಣ, ನಜೀರ್ ಸಾಬ್ ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ.
