ಸುಗ್ಗಿ ಹಬ್ಬ ( ಸಂಕ್ರಾಂತಿ ಹಬ್ಬದ ) ಸಂಕೇತವಾಗಿ ರಾಮದುರ್ಗ ಪಂಚಾಯಿತಿಯ ಸುತ್ತಮುತ್ತಲಿನ ಊರುಗಳಲ್ಲಿ ಹಾಗೂ ಕೇರಿಗಳಲ್ಲಿ ಪ್ರಸಿದ್ಧವಾಗಿರುವ ಹಾಗೂ ಗ್ರಾಮದೇವತೆಗಳ ಜಾತ್ರೆಯನ್ನು ಅಲ್ಲಿನ ಜನರು ಪುರಾತನ ಕಾಲದಿಂದಲೂ ಸಹ ಅದನ್ನು ನಡೆಸಿಕೊಂಡು ಬಂದಂತಹ ಪದ್ಧತಿಯಾಗಿದೆ ಹಾಗೂ ಪ್ರತಿ ವರ್ಷವೂ ಕೆಲವೊಂದು ಜಾತ್ರೆಗಳ ಆಚರಿಸಲು ರೂಢಿಯಲ್ಲಿದೆ ಈ ಭಾಗದಲ್ಲಿ ದಿ 22-01-2025 ರಂದು ಸುಗ್ಗಿ ಹಿನ್ನೆಲೆಯಲ್ಲಿ ಚಂದ್ರಶೇಖರಪುರ, ರಾಮದುರ್ಗ, ಕೆ. ದಿಬ್ಬದಹಳ್ಳಿ, ಯರ್ರಲಿಂಗನಹಳ್ಳಿ, ಸಕಲಾಪುರ, ಕೊರಚರಹಟ್ಟಿ ಭಾಗದ ಊರ ಹಬ್ಬ, ಹಟ್ಟಿ ಹಬ್ಬ, ಗ್ರಾಮ ದೇವತೆ ಜಾತ್ರೆಗಳಲ್ಲಿ ಕೂಡ್ಲಿಗಿ ಜನಪ್ರಿಯ ಶಾಸಕರಾದ ಶ್ರೀನಿವಾಸ್ ಎನ್ ಟಿ ಅವರು ಸಹ ತಮ್ಮ ಭಕ್ತಿ ಭಾವನೆಯಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು ಹಾಗೂ ನನ್ನ ಕ್ಷೇತ್ರದ ಸರ್ವ ಜನಾಂಗದ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ಒಳಿತಿಗಾಗಿ ಪ್ರಾರ್ಥಿಸಿ, ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ, ಅಲ್ಲಿನ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಒತ್ತು ಕೊಡುವೆ ಇನ್ನೂ ಸಾರ್ವಜನಿಕರ ಮನವಿ ಸ್ವೀಕರಿಸಿ, ಸಮಸ್ಯೆಯನ್ನು ಪರಿಶೀಲಿಸಿ, ಬಗೆಹರಿಸುವುದಾಗಿ ತಿಳಿಸಿದೆ.
ಈ ವೇಳೆ, ಗಣ್ಯಮಾನ್ಯರು, ಮುಖಂಡರು, ಊರಿನ ಹಿರಿಯರು, ಯುವಕರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
