ವಿಜಯಪುರ ಜಿಲ್ಲೆ ಇಂಡಿ ನಗರದ ರೈವೋಪಾಂಡಿ ಒಳಚರಂಡಿ ನೀರು ತುಂಬಿ ಜನರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಸ್ಥಳೀಯರು ದಿನನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.
ಇದೇ ಒಳಚರಂಡಿ ನೀರಿನಲ್ಲಿ ಕಳೆದ ರಾತ್ರಿ ಒಬ್ಬ ವ್ಯಕ್ತಿ ಬಿದ್ದು ಮುಗ್ಗರಿಸಿ ತೀವ್ರವಾಗಿ ಗಾಯಗೊಂಡಿದ್ದರು. ಬಹಳ ಹೊತ್ತಿನ ಬಳಿಕ ಸ್ಥಳೀಯರು ಗಮನಿಸಿ ಅವರನ್ನು ರಕ್ಷಿಸಿದರು. ಅದೃಷ್ಟವಶಾತ್ ದೊಡ್ಡ ಅವಘಡ ಸಂಭವಿಸಲಿಲ್ಲ.
ಈ ಸಮಸ್ಯೆಯನ್ನು ಹಲವಾರು ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದರೂ ಆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜನರ ಜೀವಕ್ಕೆ ಯಾವುದೇ ಮೌಲ್ಯವಿಲ್ಲವೆಂಬಂತೆ ಆಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ. ಸ್ಥಳೀಯರು ತಕ್ಷಣದ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ವರದಿ- ಮುಜೀಬ್ ಅಫಜಲಪುರ
