ಶಿವಮೊಗ್ಗ : ನಗರದ ಡೆಡ್ ಬಾಡಿ ರವಿ ಹಾಗೂ ಮಕ್ಕಳಾದ ಧನುಶ್ರೀಗೆ ಮಲ್ಪೆ ಬೀಚ್ ನಡೆದ ಟೀಮ್ ಈಶ್ವರ್ ಮಲ್ಪೆ ಆಪತ್ಬಾಂಧವ ಈಶ್ವರ ಮಲ್ಪೆ ಅವರ ಮಗ ದಿ. ನಿರಂಜನ್ ಸವಿ ನೆನಪಿಗಾಗಿ ಎರಡನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಸನ್ಮಾನಿಸಲಾಯಿತು.
ಡೆಡ್ ಬಾಡಿ ರವಿ ಶಿವಮೊಗ್ಗ ಭಾಗದಲ್ಲಿ ನಮ್ಮ ಮಗಳು ಕುಮಾರಿ ಧನುಶ್ರೀ ರವರೊಂದಿಗೆ ಸೇರಿ ಸುಮಾರು ೨೦೦೫ ನೇ ಸಾಲಿನಿಂದ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅನಾಥ ಶವಗಳು ಕಂಡು ಬಂದಂತಹ ಸಂದರ್ಭದಲ್ಲಿ ಪೋಲೀಸ್ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ಪೋಲಿಸ್ಸರ ಸಹಕಾರದೊಂದಿಗೆ ಅನಾಥ ಶವಗಳನ್ನು ಸ್ವಂತ ಆಟೋ ರಿಕ್ಷಾದಲ್ಲಿಯೇ ಸಾಗಿಸಿ ಶವ ಸಂಸ್ಕಾರ ಮಾಡಿ ಸಹಕರಿಸುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆಯನ್ನು ಶಿವಮೊಗ್ಗ ಜಿಲ್ಲಾ ಪೋಲೀಸ್ ಇಲಾಖೆ ಕೂಡಾ ಸನ್ಮಾನಿಸಿ ಗೌರವಿಸಿದೆ. ಈಶ್ವರ ಮಲ್ಪೆಯವರ ಈ ಸಮಾಜ ಸೇವೆಯ ಕಾಯಕವನ್ನು ನಿರಂತರವಾಗಿ ನಡೆಸುವಂತೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಭಗವಂತನು ಆಯುರಾರೋಗ್ಯ, ಸುಖ,ಶಾಂತಿ, ಸಂಪತ್ತು ನೀಡಿ ಕರುಣಿಸಲಿ ಎಂದು ಹರಸುತ್ತಾ ಗೌರವಿಸಿ ಸನ್ಮಾನಿಸಿದರು.
ಶಿವಮೊಗ್ಗ ನಗರದಲ್ಲಿ ಅನಾಥ ಶವಗಳು ಕಂಡು ಬಂದಲ್ಲಿ ಸಂಪರ್ಕಿಸಿ :
ಡೆತ್ ಬಾಡಿ ರವಿ : ೯೯೭೨೨ ೨೬೨೦೦
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
