ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕದ ಇಂಜಿನಿಯರಿಂಗ್ ಆಕಾಂಕ್ಷಿಗಳಿಗೆ KCETPlus (ಕೆಸಿಇಟಿಪ್ಲಸ್) ಸೇವೆ ಪ್ರಾರಂಭ

ಶಿವಮೊಗ್ಗ : ಪರೀಕ್ಷಾ ತರಬೇತಿ ಸೇವೆಗಳಲ್ಲಿ ರಾಷ್ಟ್ರದ ಮುಂಚೂಣಿಯ ವಿದ್ಯಾಸಂಸ್ಥೆಯಾದ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಕರ್ನಾಟಕದ XI & XII ತರಗತಿಯ ವಿದ್ಯಾರ್ಥಿಗಳಿಗೆ KCET (Karnataka Common Entrance Test) ಕೋರ್ಸುಗಳನ್ನು ಪ್ರಾರಂಭಿಸಿದೆ.
ಈ ಕೋರ್ಸುಗಳು ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಇಂಗ್ಲಿಷ್‌ನಲ್ಲಿ ನಡೆಯುವ ಈ ಕೋರ್ಸ್ ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತವೆ. ಈ KCET ಕೋರ್ಸುಗಳು ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಗಳನ್ನು ವಿಸ್ತರಿಸುವ ಮತ್ತು ರಾಜ್ಯಗಳ ಪದವಿಪೂರ್ವ ಮಂಡಳಿಗಳ ವಿದ್ಯಾರ್ಥಿಗಳೊಂದಿಗೆ ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಗುಣಮಟ್ಟದ ತರಬೇತಿಯನ್ನು ಒದಗಿಸುವ ಆಕಾಶ್ ಅವರ ಕಾರ್ಯತಂತ್ರದ ಭಾಗವಾಗಿದೆ.
ಸತತವಾಗಿ ಮೂರು ವರ್ಷಗಳ ಕಾಲ KCETನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆ ಆಕಾಶ್ ಹೊಂದಿದೆ, 2021ರಲ್ಲಿ ಮೇಘನ್ ಎಚ್.ಕೆ., 2022ರಲ್ಲಿ ಅಪೂರ್ವ್ ಟಂಡನ್ ಮತ್ತು 2023ರಲ್ಲಿ ವಿಘ್ನೇಶ್ ಎನ್. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ ನ ವ್ಯಾಪಾರ ಮತ್ತು ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಅವರು, “ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರವಾದ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸಬಲರಾಗಿಸಲು ಆಕಾಶ್ ಆಳವಾದ ಬದ್ಧತೆಯನ್ನು ಹೊಂದಿದೆ ಎಂದರು.
10ನೆಯ ತರಗತಿಯಿಂದ 11ನೆಯ ತರಗತಿಗೆ ಪ್ರವೇಶಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, 10 ನೆಯ ತರಗತಿಯ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶಗಳ ಘೋಷಣೆಯಾದ ನಂತರ ಜೂನ್-ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ (ಮೇನ್) 2027 (ಸಿಬಿಎಸ್ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಎರಡು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸನ್ನು ಆಕಾಶ್ ನಡೆಸುತ್ತಿದೆ. 11ನೆಯ ತರಗತಿಯಿಂದ 12ನೆಯ ತರಗತಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, ಕೆಸಿಇಟಿ ಮತ್ತು ಜೆಇಇ (ಮೇನ್) 2026 (ಸಿಬಿಎಸ್ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಒಂದು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸು ಮಾರ್ಚ್-ಏಪ್ರಿಲ್ 2025ರಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭವಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (KCET) ಇಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ಬ್ಯಾಚಲರ್ ಆಫ್ ಯೋಗ & ನ್ಯಾಚುರೋಪತಿ (BNYS), ಬಿ.ಎಸ್ ಸಿ. ನರ್ಸಿಂಗ್, ಮತ್ತು ಬ್ಯಾಚಲರ್ ಆಫ್ ವೆಟರಿನರಿ ಸೈನ್ಸ್ & ಅನಿಮಲ್ ಹಸ್ಬೆಂಡ್ರಿ (B.V.Sc. & A.H.)ಕೋರ್ಸುಗಳ ಪ್ರವೇಶಕ್ಕೆ ಹೆದ್ದಾರಿಯಾಗಿದೆ. ಪ್ರಮುಖಅಂಶಗಳು : ಪಠ್ಯಕ್ರಮವನ್ನುಕೆಸಿಇಟಿ ಮತ್ತು ಜೆಇಇಪಠ್ಯಗಳನ್ನುಆಧರಿಸಿ ಸಿದ್ಧಪಡಿಸಲಾಗುವುದು., ಇಂಗ್ಲಿಷ್ ನಲ್ಲಿ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುವುದು, ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪರಿಣತರು ಸಿದ್ಧಪಡಿಸುತ್ತಾರೆ. XI& ಘXII ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ ಗಳನ್ನು ಒದಗಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಜ್ಯ ಮುಖ್ಯಸ್ಥ ಅನಿಲ್ ಕುಮಾರ್, ಶಿವಮೊಗ್ಗ ಬ್ರಾಂಚ್ ಹೆಡ್ ವೀರಭದ್ರೇಶ್ವರ ಕೋರಿ, ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ ಗಿರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ