ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ನಿರಂತರ ಅಧ್ಯಯನದಿಂದ ವ್ಯಕ್ತಿ ಯಶಸ್ಸು ಹೊಂದಲು ಸಾಧ್ಯ ” – ಪ್ರೇಮಸಾಗರ ದಾಂಡೆಕರ್ ಅಭಿಮತ

ಬೀದರ್ ನಗರದ ಶಾಂತಿ ಕಿರಣ ಚಾರಿಟೇಬಲ್ ಮತ್ತು ಏಜುಕೆಶನಲ್ ಸಂಸ್ಥೆಯ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ : 13-02-2025 ರಂದು ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಚಂದ್ರಕಾಂತ ಪಾಟಿಲ್ ಅಧ್ಯಕ್ಷರು ಶಾ.ಕಿ.ಚಾ.ಮತ್ತು ಎ.ಟ್ರಸ್ಟ್ ಅವರು ಮಾತನಾಡಿ ಶಿಕ್ಷಣವು ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಣವು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದ ಜೊತೆಗೆ ಸಾಮಾಜಿಕ ಅರಿವು ಕೂಡ ಬೆಳೆಸಿಕೊಡುವಂತದ್ದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಭವಿಷ್ಯದ ಜೀವನ ಉಜ್ವಲವಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೇಮಸಾಗರ ದಾಂಡೆಕರ್, ನಿರ್ದೆಶಕರು ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೀದರ್, ಅವರು ಮಾತನಾಡಿ ಸತತ ಪರಿಶ್ರಮ, ನಿರಂತರ ಅಧ್ಯಯನದಿಂದ ವ್ಯಕ್ತಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಪ್ರಯತ್ನಶೀಲರಾಗಿ ತಮ್ಮ ಗುರಿಯನ್ನು ತಲುಪಬೇಕು. ಶಿಸ್ತು, ಸಮಯ ಪ್ರಜ್ಞೆ, ಗುರು-ಹಿರಿಯರಲ್ಲಿ ಗೌರವ ಮನೋಭಾವದಿಂದ ಇದ್ದಾಗ ಮಾತ್ರ ಅವರು ತಮ್ಮ ಸಾಧನೆ ಮಾಡಲು ಸಾಧ್ಯ ಹಾಗೂ ಸೂಕ್ತ ಮಾರ್ಗದರ್ಶನ ಪಡೆದಾಗ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ನಿಷ್ಠೆ ಹಾಗೂ ಶ್ರದ್ಧೆಯಿಂದ ಅಭ್ಯಾಸದ ಕಡೆಗೆ ಗಮನ ಹರಿಸಬೇಕು ಮತ್ತು ಪರಿಕ್ಷೇಯ ಮಹತ್ವವನ್ನು ತಿಳಿಸಿದರು. ಜೊತೆಗೆ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಜಿಲ್ಲೆಯ ಮಾದರಿ ಕಾಲೇಜುಗಳಲ್ಲಿ ಇದು ಕೂಡ ಒಂದಾಗಿ ಹೊರ ಹೊಮ್ಮುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಗಳಾದ ಪರಮ ಪೂಜ್ಯ ಶ್ರೀ ಗಣೇಶಾನಂದ ಮಹಾರಾಜರು ಅವರು ಮಾತನಾಡಿ ಶಿಕ್ಷಣದ ವಿಶೇಷ ಅರ್ಹತೆ, ಸಾಮರ್ಥ್ಯಗಳ ಕುರಿತು ತಿಳಿಸಿದರು. ಕಾಲೇಜೀನ ನಿರ್ದೆಶಕರಾದ ಕಲ್ಪನಾ ಪಿ.ಮಠಪತಿ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮನೆ, ಮಹಾವಿದ್ಯಾಲಯ, ಊರು ಹಾಗೂ ದೇಶದ ಹೆಸರನ್ನು ಬೆಳೆಸಬೇಕು, ಕೀರ್ತಿಯನ್ನು ತರಬೇಕು, ಯಶಸ್ಸು ಹೊಂದಬೇಕೆಂದರು. ಕಾಲೇಜಿನ ಪ್ರಾಚಾರ್ಯರಾದ ಕು. ಮಂಗಲ ಎಮ್. ಮಾತನಾಡಿ ವಿದ್ಯಾರ್ಥಿಗಳು ನಿರಾಶವಾದಿಗಳಾಗದೇ ಆಶಾವಾದಿಗಳಾಗಿ, ಛಲವಾದಿಗಳಾಗಿ ಧನಾತ್ಮಕ ಚಿಂತನೆ ಮಾಡುತ್ತಾ ಪ್ರಗತಿಪರ ದೃಷ್ಟಿಕೋನ ಹೊಂದಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಪರಶುರಾಮ ಶಿಂಧೆ, ಶ್ರೀ ಆನಂದ, ಶ್ರೀ ಸಂದಿಪ, ಶ್ರೀಮತಿ ಪೂಜಾ, ಕು. ಜ್ಯೊತಿ, ಶ್ರೀಮತಿ ಅಂಬಿಕಾ ಹೆಚ್, ಶ್ರೀಮತಿ ಅಂಬಿಕಾ ಆರ್,
ಶ್ರೀಮತಿ ಲತಾ ಡಿ, ಶ್ರೀಮತಿ ಮೇನಕ, ಶ್ರೀಮತಿ ನಿತಾ ಕೆ , ಶ್ರೀ ಶಶಿಕಾಂತ, ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕರಾದ ಶ್ರೀ ಅನೀಲ ಎಮ್. ಸ್ವಾಗತಿಸಿದರು, ಶ್ರೀ ಶಿವಕುಮಾರ ಬಾವಿಕಟ್ಟೆ ನಿರೂಪಿಸಿದರು ಮತ್ತು ಶ್ರೀ ಎನ್.ಬಿ.ಮಹೇಶ ವಂದಿಸಿದರು.

ವರದಿ: ಚಂದ್ರಕಾಂತ ಝಬಾಡೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ