ಧಾರವಾಡ: ಸ್ಪೀಕ್ ಫಾರ್ ಇಂಡಿಯಾ ಕರ್ನಾಟಕ ಎಡಿಷನ್ 2025 ರ ಜಿಲ್ಲಾ ಹಂತದ ಚರ್ಚಾ ಸ್ಪರ್ಧೆ ವೇದಿಕೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧಾರವಾಡ ಜಿಲ್ಲೆಯ ಸಿಎಸ್ಐ ಕಾಲೇಜಿನಲ್ಲಿ 20-2-2025 ಗುರುವಾರದಂದು ಹಮ್ಮಿಕೊಂಡಿದ್ದ ಅಂತರ್ ಕಾಲೇಜು ಸ್ಪೀಕ್ ಫಾರ್ ಇಂಡಿಯಾ ಕರ್ನಾಟಕ ಎಡಿಷನ್ 2025 ರಲ್ಲಿ ಭಾಗವಹಿಸಿ ಮೊದಲ ಆವೃತ್ತಿಯಲ್ಲಿ ನಮ್ಮ ಸರ್ಕಾರ ಮಂಗಳ ಗ್ರಹದ ವಸಾಹತುಶಾಹಿಗಾಗಿ ಮತ್ತು ಇತರೆ ಗ್ರಹಗಳ ಬಾಹ್ಯಾಕಾಶಕ್ಕೆ ಹಣವನ್ನು ಖರ್ಚು ಮಾಡಬೇಕೆನ್ನುವ ಸವಾಲಿಗೆ ಸರಿಯಾದ ಉತ್ತರ ನೀಡುವುದರ ಮೂಲಕ ಮಾತನಾಡಿದರು.
ಎರಡನೇಯ ಆವೃತ್ತಿಯಲ್ಲಿ ಚುನಾವಣಾ ಪ್ರಚಾರಗಳು ನಿಲುವಳಿ ಸೂಚನೆಯ ವಿರುದ್ಧ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುತ್ತಿವೆಯೇ? ಎಂಬ ಸವಾಲಿಗೆ ನಿಜವಾದ ಸಂಗತಿಯನ್ನು ಕುರಿತು ಮಾತನಾಡಿದ ಜಿ. ಕೆ ಕಾನೂನು ಕಾಲೇಜಿನ ವಿದ್ಯಾರ್ಥಿ ನಾಗರಾಜ ಅವರು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು. ಭೋದಕ ಬೋಧಕೇತರ ಸಿಬ್ಬಂದಿಯವರು ಹಾಗೂ ಕುಟುಂಬದ ಸದಸ್ಯರು ಸ್ನೇಹಿತ ಬಳಗದವರು ಶುಭ ಹಾರೈಸಿದ್ದಾರೆ.
- ಕರುನಾಡ ಕಂದ
