ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಶುಕ್ರವಾರ ತೊಗರಿ ಖರೀದಿ ಕೇಂದ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾ ಸಾಹೇಬಗೌಡ ಪಾಟೀಲ, ಉಪಾಧ್ಯಕ್ಷ ಅರವಿಂದ ದೊಡ್ಡಮನಿ ಚಾಲನೆ ನೀಡಿದರು.
ಸಂಘದ ಅಧ್ಯಕ್ಷ ಅಣ್ಣಾಸಾಹೇಬಗೌಡ ಪಾಟೀಲ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರ ತೊಗರಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ತೊಗರಿ ಖರೀದಿ ಮಾಡಿಕೊಳ್ಳುತ್ತಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಸಂಘದ ನಿರ್ದೇಶಕರಾದ ಬಿ.ಬಿ.ಬಿರಾದಾರ, ಆನಂದ ಹಣಮಶೆಟ್ಟಿ, ಬಸಗೊಂಡ ಸಿಂದಗಿ, ರಾಹುಲ ಕಲಗೊಂಡ, ಸಂಗಪ್ಪ ಬೇಡರ ಮಾಜಿ ನಿರ್ದೇಶಕರಾದ ಬಸಪ್ಪ ಹಣಮಶೆಟ್ಟಿ, ಅಪ್ಪುಗೌಡ ಬಿರಾದಾರ, ರಾಯಪ್ಪ ಜಿಡ್ಡಿ ಹಾಗೂ ಗ್ರಾಮಸ್ಥರಾದ ಸುಭಾಷ ಕಲ್ಯಾಣಿ, ಅಶೋಕ ಇಂಡಿ, ಕಲ್ಲುಗೌಡ ಪಾಟೀಲ, ಬಾಬು ಜನವಾಡ, ಜಾವು ಮಸಳಿ, ಮಹೇಶ ಹಾವಿನಾಳ, ಅಂಭಾಜಿ ಶಿಂಧೆ, ಮುತ್ತಪ್ಪ ನಂದಿ, ಮೌಲಾಲಿ ಕರೋಶಿ ಸಹಕಾರಿ ಸಂಘದ ವ್ಯವಸ್ಥಾಪಕರಾದ ಎಲ್.ಎನ್.ಬಿರಾದಾರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
- ಕರುನಾಡ ಕಂದ
