ವೃಕ್ಷೋ ರಕ್ಷತಿ ರಕ್ಷಿತಹ ವೃಕ್ಷಗಳನ್ನು ನಾವು ರಕ್ಷಣೆ ಮಾಡಿದರೆ ರಕ್ಷವು ನಮ್ಮನ್ನು ರಕ್ಷಣೆ ಮಾಡುತ್ತದೆ, ಅನಾದಿಕಾಲದಿಂದಲೂ ಪೂರ್ವಜರು ವೃಕ್ಷಗಳನ್ನು ಪೂಜಿಸಿ ಆರಾಧಿಸುತ್ತಾ ಬಂದಿದ್ದಾರೆ ಇದಕ್ಕೆ ಮೂಲ ಕಾರಣ ಋಷಿಮುನಿಗಳು ಹೊಂದಿದ್ದ ವೃಕ್ಷಗಳ ಮೇಲಿನ ನಂಬಿಕೆ ಮತ್ತು ಪೂಜ್ಯನೀಯ ಭಾವನೆ.
ಭಾರತ ದೇಶದ ಪರಂಪರೆಯಲ್ಲಿ ಗಿಡ ಮರ ಬಳ್ಳಿಗಳ ಪ್ರಾಣಿ ಪಕ್ಷಿಗಳು ಹಾಗೂ ಆಕಾಶ ಮತ್ತು ಭೂಮಿ ಹಾಗೂ ಜಲಚರವಾಸಿಗಳು ತಮ್ಮದೇ ಆದ ಜೀವನ ಹೊಂದಿರುತ್ತವೆ. ಇದರಲ್ಲಿ ಮನುಷ್ಯನ ಅತ್ಯಂತ ಬುದ್ಧಿಶಕ್ತಿಯನ್ನು ಹೊಂದಿದ್ದು ಉಳಿದ ಎಲ್ಲಾ ಪ್ರಾಣಿ ಪಕ್ಷಿಗಳು ಬುದ್ಧಿಶಕ್ತಿಯನ್ನು ಹೊಂದಿರಲಾರವು.
ಭೂಮಿಯ ಮೇಲೆ ವಾಸಿಸುವ ಎಲ್ಲಾ ಪ್ರಾಣಿ ಪಕ್ಷಿಗಳು ಇನ್ನೊಂದು ಜೀವಿಯನ್ನು ಅವಲಂಬಿತರಾಗಿ ಜೀವನವನ್ನು ಸಾಗಿಸುತ್ತೇವೆ. ಮನುಷ್ಯ ಪ್ರಕೃತಿಯ ಮೇಲೆ ಅವಲಂಬಿತನಾದರೆ ಪ್ರಾಣಿ ಪಕ್ಷಿಗಳು ಪ್ರಕೃತಿಯ ಮೇಲೆ ಅವಲಂಬಿತವಾಗಿವೆ. ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳು ಪ್ರಕೃತಿಯಲ್ಲಿ ಬೆಳೆದಿರುವ ಗಿಡ ಮರಗಳಿಂದ ಬರುವಂತಹ ಆಹಾರದ ವಸ್ತುಗಳನ್ನು ಸೇವನೆ ಮಾಡಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪಲಾಯನ ಮಾಡುವ ಮೂಲಕ ತಮ್ಮದೇ ಆದ ಜೀವನವನ್ನು ಕಟ್ಟಿಕೊಂಡು ಜೀವಿಸಲಾರಂಭಿಸಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಅತಿರೇಕದ ಆಲೋಚನೆಗಳಿಂದ ಮತ್ತು ಅಧುನಿಕತೆಯಿಂದ ತನ್ನನ್ನು ತಾನು ಮರೆತು ಹೋಗುವ ಸ್ಥಿತಿಗೆ ಬಂದಿದ್ದಾನೆ.
ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯಕ್ಕೆ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಪರಿಸರ ಸಂರಕ್ಷಣೆ ಪ್ರಥಮ ಆದ್ಯತೆಯಾಗಬೇಕು, ಪರಿಸರ ದಿನೇ ದಿನೆಮಲೀನವಾಗುತ್ತಿದೆ. ಶುದ್ಧ ಗಾಳಿಯು ಸಿಗುತ್ತಿಲ್ಲ, ಪರಿಸರ ಮಾಲಿನ್ಯದಿಂದ ಹೊಸ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ಇಳಿ ವಯಸ್ಸಿನಲ್ಲಿ ಸಾವು, ನೋವುಗಳು ಸಂಭವಿಸುತ್ತಿವೆ. ಇದಕ್ಕೆಲ್ಲ ಪರಿಸರದ ಅಸಮತೋಲನವೇ ಕಾರಣವಾಗಿದೆ.ಆದ್ದರಿಂದ ಯುವಕರು,ಮಕ್ಕಳು ಪರಿಸರ ರಕ್ಷಣೆ ಮಾಡಬೇಕು. ಗಿಡಗಳನ್ನು ಬೆಳೆಸಬೇಕು, ಕಡಿಯಬಾರದು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ.ಪ್ರತಿ ವರ್ಷ ಜೂನ್ 5 ಕ್ಕೆ ವಿಶ್ವ ಪರಿಸರ ದಿನ ಆಚರಿಸುತ್ತೇವೆ. ಪರಿಸರ ದಿನಾಚರಣೆ ಕೇವಲ ಒಂದೇ ದಿನಕ್ಕೆ ಸೀಮೆತವಾಗದೆ ಪ್ರತಿ ದಿನ ಆಚರಿಸಬೇಕು. ವನಸಿರಿ ಫೌಂಡೇಷನ್ ತಂಡ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಪ್ರತಿ ದಿನ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಸಿ ನೆಟ್ಟು ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಪ್ರಾರಂಭಿಸಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಪ್ರಜ್ಞೆ ಮೂಡಿಸುತಿದೆ. ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳೆಲ್ಲಾ ಮುಂದೊಂದು ದಿನ 0 ದಿಂದ ಹೀರೋಗಳು ಆಗಬೇಕಾದರೆ ಪರಿಸರ ರಕ್ಷಣೆ ಮಾಡಬೇಕು.
ಹುಟ್ಟುಹಬ್ಬಕ್ಕೆ ಒಂದು ಗಿಡ ನೆಟ್ಟರೆ ಅದು ನಮಗೆ ಅಷ್ಟೇ ನೆರಳು ಕೊಡುವುದಿಲ್ಲ, ನಮ್ಮ ಸುತ್ತಮುತ್ತಲಿನ ಎಲ್ಲರಿಗೂ ನೆರಳನ್ನು ನೀಡುತ್ತದೆ. ಪ್ರತಿಯೊಬ್ಬರೂ ಹುಟ್ಟುಹಬ್ಬದ ಅಂಗವಾಗಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ವಿಶ್ವಪರಿಸರ ದಿನಾಚರಣೆ, ಗುಟುಕು ನೀರಿನ ಅರವಟ್ಟಿಗೆ ಅಭಿಯಾನ, ಏಪ್ರಿಲ್ ಫೂಲ್ ಬದಲಿಗೆ ಏಪ್ರಿಲ್ ಕೂಲ್ ಕಾರ್ಯಕ್ರಮ, ಪರಿಸರ ಜಾಥಾ ಕಾರ್ಯಕ್ರಮ, ರಕ್ಷಾಬಂಧನದ ಜೊತೆಗೆ ವೃಕ್ಷ ಬಂಧನ ಆಚರಣೆ, ಆಕ್ಸಿಜನ್ ಕ್ರಾಂತಿ ಯೋಜನೆ, ಮಗುವಿಗಾಗಿ ಒಂದು ಗಿಡ, ಪರಿಸರ ಜಾಗೃತಿ ಕಾರ್ಯಕ್ರಮ, ತಾಯಿಗಾಗಿ ಒಂದು ಗಿಡ, ಸಸಿ ವಿತರಣೆ, ಗೃಹಪ್ರವೇಶ, ಹುಟ್ಟುಹಬ್ಬ, ಸಸ್ಯ ಶ್ಯಾಮಲ ಹೀಗೆ ಇನ್ನೂ ಹಲವಾರು ಯೋಜನೆಗಳ ಮೂಲಕ ವನಸಿರಿ ತಂಡ ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡಲು ಫಣ ತೊಟ್ಟಿದೆ.
ಪಾಣಿ-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು. ಪ್ರಾಣಿ ಪಕ್ಷಿಗಳು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ ಅತ್ಯಾವಶಕವಾಗಿವೆ.ಭಾರತದ ಇತಿಹಾಸ ಪರಂಪರೆಯಲ್ಲಿ ಪ್ರಾಣಿ,ಪಕ್ಷಿ,ಮರಗಳು ಹಾಗೂ ನದಿಗಳನ್ನು ಪೂಜ್ಯನೀಯ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ವಚ್ಚಂದವಾಗಿ ಆಕಾಶದಲ್ಲಿ ಚಿಲಿಪಿಲಿ ಗುಡುತ್ತ ಹಾರಾಡುವ ಹಕ್ಕಿಗಳನ್ನು ನಾವು ಕಾಣುತ್ತೇವೆ.ಪ್ರತಿಯೊಂದು ಪಕ್ಷಿಗಳಿಗೆ ತನ್ನದೇಯಾದ ವಿಶೇಷತೆ ಇದೆ.
ಗುಬ್ಬಚ್ಚಿ, ಗಿಣಿ, ಪಾರಿವಾಳ, ಕಾಗೆ, ಹದ್ದು, ಅಳಿಲು, ನವಿಲು, ಗುಟುರು ಹಕ್ಕಿಗಳು ಸೇರಿದಂತೆ ಇನ್ನೂ ಹಲವಾರು ಪಕ್ಷಿಗಳಿಗೆ ಬೇಸಿಗೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನೀರಿಲ್ಲದಿದ್ದರೆ ಅವು ಬದುಕಲಾರವು ಹಾಗಾಗಿ ಎಲ್ಲಾ ಪರಿಸರ ಹಾಗೂ ಪಕ್ಷಿ ಪ್ರೇಮಿಗಳು ನಿಮ್ಮ ಮನೆಯ ಹಿತ್ತಲಿನ ಕೈತೋಟ, ಕಚೇರಿ, ಹೊಲ-ಗದ್ದೆಯ ಗಿಡ ಮರಗಳ ಟೊಂಗೆಗಳಿಗೆ ನೀರಿನ ಅರೆವಟ್ಟಿಗೆಗಳನ್ನು ಕಟ್ಟಿ ಅವುಗಳಿಗೆ ನಿರುಣಿಸುವ ಕಾರ್ಯವನ್ನು ಮಾಡಬೇಕು. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ.
ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು,ಪಕ್ಷಿಗಳ ಜೀವಕ್ಕೆ ಆಪತ್ತು ಎದುರಗುತ್ತಿದೆ. ಅದಕ್ಕಾಗಿಯೇ ನಮ್ಮ ವನಸಿರಿ ಪೌಂಡೇಷನ್ ತಂಡ ಪ್ರತಿ ವರ್ಷ ಏಪ್ರಿಲ್ ನಲ್ಲಿ ಎಪ್ರೀಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಕಾರ್ಯಕ್ರಮ ಮಾಡುವ ಮೂಲಕ ಪ್ರಾಣಿಪಾಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಿದೆ. ಆದರೆ ಈ ವರ್ಷ ಎಪ್ರೀಲ್ ಗೂ ಮೊದಲೇ ಬೇಸಿಗೆ ಆರಂಭವಾಗಿರುವುದರಿಂದ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಮಾಡುವ ಮೂಲಕ ನೀರುಣಿಸುತ್ತಿದ್ದೇವೆ. ಇದಕ್ಕೆ ಎಲ್ಲಾ ಪರಿಸರ ಪ್ರೇಮಿಗಳು ಕೈಜೋಡಿಸಬೇಕು. ಈ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ಇಡುವ ಮೂಲಕ ಕಾಳು ಮತ್ತು ನೀರು ಉಣಿಸುವ ಕಾರ್ಯವನ್ನು ಮಾಡುವ ಮೂಲಕ ಪಕ್ಷಿ ಸಂಕುಲ ಉಳುವಿಗೆ ಶ್ರಮಿಸೋಣ ಬನ್ನಿ ವನಸಿರಿ ಫೌಂಡೇಷನ್ ಜೊತೆಗೆ ಕೈಜೋಡಿಸಿ…
- ಇಂತಿ
ಚನ್ನಪ್ಪ ಕೆ. ಹೊಸಹಳ್ಳಿ ವನಸಿರಿ ಪೌಂಡೇಷನ್ ಸಾಮಾಜಿಕ ಜಾಲತಾಣ ಅಧ್ಯಕ್ಷರು ರಾಯಚೂರು.