ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ದೇವರಮನಿ ಲೇಔಟ್ ಶಹಾಪೂರ ರಸ್ತೆಯಲ್ಲಿರುವ ಅಪ್ಪಾಜಿ ಪಬ್ಲಿಕ್ ಸ್ಕೂಲ್ ಜೇವರ್ಗಿಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ತಾಲೂಕ ದಂಢಾಧಿಕಾರಿಗಳಾದ ಶ್ರೀ ಮಲ್ಲಣ್ಣ ಯಲಗೋಡ ರವರು ಜ್ಯೋತಿ ಬೆಳಗಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಯ ಮೂರ್ತಿ ಚಿಕ್ಕದಿದ್ದರೂ ಶಾಲೆಯ ಎಲ್ಲಾ ಕಲಿಕಾಂಶಗಳಾಗಲಿ, ಚಿಕ್ಕ ವಯಸ್ಸಿನಲ್ಲಿ ವಿಜ್ಞಾನದ ತಾರ್ಕಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಶಿಕ್ಷಕ/ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಾಮುಖ್ಯತೆಯಿದೆ ಅದೇ ರೀತಿಯಾಗಿ ವಸ್ತು ಪ್ರದರ್ಶನ ನೋಡಿ ವಿದ್ಯಾರ್ಥಿ ಮತ್ತು ಸಂಸ್ಥೆಯ ಕೀರ್ತಿ ಬಹು ದೊಡ್ಡದಾಗಿದೆ ಹಾಗಾಗಿ ಎಡೆಬಿಡದೆ ನಿರಂತರವಾಗಿ ನಿಮ್ಮ ಮಾರ್ಗದರ್ಶನ ವಿದ್ಯಾರ್ಥಿಗಳ ಮೇಲೆ ಹೀಗೆ ಇರಲಿ ಎಂದು ಉದ್ಘಾಟನೆಯ ನುಡಿಗಳನ್ನು ಹೇಳಿದರು.
ಅಪ್ಪಾಜಿ ಚಾರಿಟೇಬಲ್ ಮೆಮೋರಿಯಲ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಎಮ್. ಎಸ್. ಹಿರೇಮಠ ರವರು ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚು ಸಮಯ ಕಲಿಕೆಯಲ್ಲಿ ಭಾಗಿಯಾದರೆ ಅದರಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ ಹಾಗೆಯೇ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ,ಶಿಕ್ಷಕ ಹಾಗೂ ಪಾಲಕರು ಕೊಂಡಿಯಾಗಿ ನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿ ಬೋಧನೆಯಾಗುತ್ತದೆ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾದ ಶ್ರೀ ಸಂಜಯ ಪವಾರ್ ಎಸ್ ಆರ್ ಇ ಕಾಲೇಜ್ ಪ್ರಾಂಶುಪಾಲರು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ತಾರ್ಕಿಕ ಬದುಕಿನ ಬಗ್ಗೆ ತಿಳಿಯಲು ಗಣಿತ ಮತ್ತು ಕಲಿಕಾ ಉದಾರಣೆಗಳೊಂದಿಗೆ ಸಂವಾದದ ಮುಖೇನ ಅನಿಸಿಕೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಹಶಿಲ್ದಾರ ಮಲ್ಲಣ್ಣ ಯಲಗೋಡ, ಶ್ರೀಮತಿ ಶೋಭಾ ಸಜ್ಜನ ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಇಲಾಖೆ ಜೇವರ್ಗಿ, ಸಂಜಯ ಪವಾರ್ ಎಸ್ ಆರ್ ಇ ಪ್ರಾಂಶುಪಾಲರು, ಚಂದ್ರಶೇಖರ ಪಾಟೀಲ್ ನಿರ್ದೇಶಕರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯ ಜೇವರ್ಗಿ, ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಕಲಾ ದೊಡಮನಿಯವರು ಪ್ರಾರ್ಥನೆ ಗೀತೆಯ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಪಾಲಕ /ಪೋಷಕರು, ಶಿಕ್ಷಕ/ಕಿಯರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಸುರೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಚಂದ್ರಶೇಖರ ಪಾಟೀಲ್