ವಿಜಯಪುರ : ಬಡವರ ರೇಷನ್ ಅಕ್ಕಿಯನ್ನು ಕಡಮೆ ಬೆಲೆಗೆ ಖರೀದಿಸಿ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಇಂಡಿ ತಾಲ್ಲೂಕಿನ ಶಹರ ಪೋಲೀಸ್ ಠಾಣೆ ಅಧಿಕಾರಿಗಳು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಆಹಾರ ನಿರೀಕ್ಷಕರಾದ ಪರಮಾನಂದ ಹೂಗಾರ ಹಾಗೂ ಇಂಡಿ ಪಟ್ಟಣದ ಪೋಲೀಸ್ ನಿರೀಕ್ಷಕರಾದ ಪ್ರದೀಪ ಬೀಸೆ ರವರ ನೇತೃತ್ವದಲ್ಲಿ ರೇಷನ್ ಅಕ್ಕಿಯನ್ನು ವಾಹನದ ಸಮೇತ ಆರೋಪಿಗಳನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಡೆದ ಕಾರ್ಯಾಚರಣೆಯಲ್ಲಿ ಒಟ್ಟು ಒಂದು ಸಾವಿರದ ಒಂದು ನೂರಾ ಹತ್ತು ಕೆ.ಜಿ ಆಕ್ಕಿ ಸುಮಾರು ಮೂವತ್ತೆರಡು ಸಾವಿರ ಮೌಲ್ಯ, ವಾಹನದ ಬೆಲೆ ಐದು ಲಕ್ಷ ಅಂದಾಜು ಮಾಡಲಾಗಿದೆ.
ಇಂಡಿ ಪಟ್ಟಣದ ರೈಲು ನಿಲ್ದಾಣ ಹತ್ತಿರ ಪ್ಲಾಸ್ಟಿಕ್ ಚೀಲಗಳಲ್ಲಿ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಅಕ್ಕಿ ಸಾಗಾಣಿಕೆ ಮಾಡುತ್ತಿರುವ ಇಂಡಿ ಪಟ್ಟಣದ ವಕಾಸ್ ಅಲಿಮ್ ಶೇಖ್ ಹಾಗೂ ಸುಹೇಲ್ ಕಲಬುರ್ಗಿ ಎಂಬ ಆರೋಪಿಗಳನ್ನು ಬಂಧಿಸಿ ಇಂಡಿ ಶಹರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ- ಮುಜೀಬ್ ಅಫಜಲಪುರ