ಉತ್ತರ ಕನ್ನಡ/ ಶಿರಸಿ : ಶ್ರೀಯುತ ಜಿ.ಯು. ಹೆಗಡೆ ಅವರು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಹೈಸ್ಕೂಲ್ ವಿಭಾಗದಲ್ಲಿ ಗಣಿತ ಪ್ರಾದ್ಯಾಪಕರಾಗಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಹೃದಯಿ, ಸ್ನೇಹಮಯಿ, ಉತ್ತಮ ಸಂಘಟಕ, ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಉಳ್ಳವರು, ಸದಾ ಹಸನ್ಮುಖಿ ಆಗಿರುವುದರ ಜೊತೆಗೆ ಉತ್ತಮ ಶಿಕ್ಷಕರಾಗಿದ್ದ ಶ್ರೀ ಜಿ ಯು ಹೆಗಡೆ ಅವರು ಹೃದಯ ಸ್ಥoಬನದಿಂದ ವಿಧಿವಶರಾದರು.
ಶ್ರೀಯುತರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿತ್ತು. 59ನೇ ವಯಸ್ಸಿನಲ್ಲಿದ್ದ ಇವರು ಇನ್ನೇನು ನಿವೃತ್ತಿ ಆಗುವ ಸಮಯದಲ್ಲಿ ಕರ್ತವ್ಯ ನಿರತರಾಗಿರುವಾಗಲೇ ದಿ. ಮಾರ್ಚ್ 13ರಂದು ಇಹಲೋಕ ತ್ಯಜಿಸಿದ್ದಾರೆ. ಶ್ರೀಯುತರ ಸದ್ಗತಿಗೆ ಪೂಜ್ಯ ಶ್ರೀಗಳವರು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮೃತರಿಗೆ ಸದ್ಗತಿ ಪ್ರಾಪ್ತವಾಗಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ಶ್ರೀಮಠದ ದೇವರು ಅನುಗ್ರಹಿಸಲಿ ಎಂದು ಭಕ್ತವೃಂದದ ಪರವಾಗಿ ಪ್ರಾರ್ಥಿಸುತ್ತೇವೆ ಎಂದು ಶ್ರೀ ಸ್ವರ್ಣವಲ್ಲಿ ಮಠಾದೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ