ವಿಜಯಪುರ/ ತಾಳಿಕೋಟಿ: ತಾಲೂಕಿನ ತುರಕನಗೇರಿ ಗ್ರಾಮದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಕೊಡ ಮಾಡುವ 2025 ನೇ ಸಾಲಿನ “ಸಿದ್ದಗಂಗಾ ಶ್ರೀ ರತ್ನ” ಪ್ರಶಸ್ತಿಗೆ ಪಟ್ಟಣದ ಯುವ ಪತ್ರಕರ್ತ ಅಲ್ಲಾಭಕ್ಷ ಚಳ್ಳಿಗಿಡದ ಭಾಜನ ರಾಗಿದ್ದಾರೆ. ಪಟ್ಟಣದ ಕ್ರಿಯಾಶೀಲ ಯುವ ಪತ್ರಕರ್ತರಾದ ಚಳ್ಳಿಗಿಡದ ಇವರು ಕಳೆದ ಹತ್ತು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸಕ್ರಿಯರಾಗಿದ್ದು, ಪ್ರಸಕ್ತ ತಮ್ಮದೇ ನೇತೃತ್ವದ TLK Express ಯೂಟ್ಯೂಬ್ ಚಾನೆಲ್ ಮತ್ತು ಯಾದಗಿರಿ ಜಿಲ್ಲೆಯ ಕಾರಂಜಿ ಎಕ್ಸ್‌ಪ್ರೆಸ್ ದಿನಪತ್ರಿಕೆಯ ತಾಳಿಕೋಟಿ ತಾಲೂಕಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು ತಮ್ಮ ನೇರ ವಸ್ತುನಿಷ್ಠ ವರದಿಗಳಿಗಾಗಿ ಚಿರಪರಿಚಿತರಾಗಿದ್ದಾರೆ. ಇದೀಗ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯು ಮಾಧ್ಯಮ ಕ್ಷೇತ್ರದಲ್ಲಿಯ ಅವರ ಈ ಕ್ರಿಯಾಶೀಲತೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದಿ. 22.03.2025 ಶನಿವಾರ ದಂದು ತುರುಕನಗೇರಿ ಗ್ರಾಮದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಮಸುದ್ದೀನ ಇನಾಮದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿಗಾರರು ನಜೀರ್ ಅಹ್ಮದ್ ಚೋರಗಸ್ತಿ ತಾಳಿಕೋಟಿ