ಬಳ್ಳಾರಿ/ ಕಂಪ್ಲಿ : “ನೀರು ಕೊಟ್ಟು ಪುಣ್ಯ ಕಟ್ಕೊಳ್ಳಿ” ಎಂಬ ಶೀರ್ಷಿಕೆ ಅಡಿಯಲ್ಲಿ 10ನೇ ಮಾರ್ಚ್ 2025 ರಂದು ಕಂಪ್ಲಿ ಕೋಟೆಯ ಹಲವಾರು ದಿನಗಳಿಂದ ಶುದ್ಧ ನೀರಿನ ಘಟಕ ದುರಸ್ತಿಯಲ್ಲಿದೆ ಎಂಬ ಸುದ್ದಿಯನ್ನು “ಕರುನಾಡ ಕಂದ” ಸುದ್ದಿ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡ ಕಂಪ್ಲಿ ಪುರಸಭೆಯ ಅಧ್ಯಕ್ಷರು ಭಟ್ಟ ಪ್ರಸಾದ, ಕೋಟೆಯ 13ನೇ ವಾರ್ಡಿನ ಪುರಸಭಾ ಸದಸ್ಯರಾದ ಲಡ್ಡು ಹೊನ್ನೂರವಲಿ ಹಾಗೂ ಇಲಾಖೆಯ ಅಧಿಕಾರಿಗಳು ಕೆಟ್ಟು ಹೋಗಿದ್ದ ಮೆಂಬರಿನ್, ವಿಜಿಲ್, ಸ್ಯಾಂಡ್ ಹಾಗೂ ಕಾರ್ಬನ್ ಇತರೆ ಯಂತ್ರಗಳನ್ನು ದುರಸ್ತಿಗೊಳಿಸಿ ಶುದ್ಧ ನೀರಿನ ಘಟಕ ಕಾರ್ಯಾರಂಭ ಮಾಡಿದ್ದಾರೆ. ಅವರಿಗೆ ನಮ್ಮ ಪತ್ರಿಕಾ ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳು.
ಈ ಸಂದರ್ಭದಲ್ಲಿ ಕೋಟೆ ಪ್ರದೇಶದ ನಿವಾಸಿಗಳು ಸಂತೋಷಗೊಂಡು ‘ಕರುನಾಡ ಕಂದ’ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಜಿಲಾನ ಸಾಬ್ ಬಡಿಗೇರ್