ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೈಚನಹಳ್ಳಿ ಕಸಬಾ ಮರವಳಲು ಗ್ರಾಮದಲ್ಲಿ ಪಟ್ಟಣದ ಕ್ರಿಸ್ತಜ್ಯೋತಿ ಶಾಲೆ ಅರಕಲಗೂಡು ಹಾಗೂ ಬೈಚನಹಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಮರವಳಲು ಗ್ರಾಮದ ಮುಖಂಡರಾದ ಹನುಮೇಗೌಡ್ರು ಹಾಗೂ ಬೈಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಂಜಮ್ಮ ಹಾಗೂ ಪಿಡಿಒ ನಾಗರಾಜ್ ಮತ್ತು ಕ್ರಿಸ್ತಜ್ಯೋತಿ ಶಾಲೆಯ ಪ್ರಾಂಶುಪಾಲರಾದ ಸೆಬಾಸ್ಟಿಯನ್ P.J ಕಾರ್ಯಕ್ರಮದ ಉಸ್ತವಾರಿಗಳಾಗಿದ್ದು ಎರಡು ದಿನದ ಈ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದು ಇದಕ್ಕೆ ಪ್ರತಿಷ್ಠಿತ ಆಸ್ಪತ್ರೆಗಳಾದ
ಇಂಡಿಯಾನಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರ್ ಸಿ ರಸ್ತೆ ಹಾಸನ ಸುನಂದ ಮಲ್ಟಿ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕೆ.ಆರ್. ಪುರಂ ಹಾಸನ ಮತ್ತು ಜೀವಿತ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನಾಕ್ರುತ ಅರಕಲಗೋಡು ಹಾಗೂ ರಕ್ತ ನಿಧಿ ಸರ್ಕಾರಿ ಆಸ್ಪತ್ರೆ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಮರವಳಲು ಗ್ರಾಮ ಉಚಿತ ಆರೋಗ್ಯ ತಪಾಸಣೆ ಸಿಬಿರವನ್ನು ಹಮ್ಮಿಕೊಂಡಲಾಗಿತ್ತು ಇದರ ಸದುಪಯೋಗವನ್ನು ಸುಮಾರು 640 ಕ್ಕೂ ಹೆಚ್ಚು ಸಾರ್ವಜನಿಕರು ಸದುಪಯೋಗಪಡಿಸಿಕೊಂಡಿದ್ದಾರೆ ಹಾಗೂ 40 ಯೂನಿಟ್ ರಕ್ತವನ್ನು ಕೂಡಾ ನೀಡಿದ್ದಾರೆ.
- ಸುಧೀಂದ್ರ ಡಿ ಅರಕಲಗೂಡು