ಬಳ್ಳಾರಿ / ಕಂಪ್ಲಿ : ಕಳೆದ ಮೂರು ನಾಲ್ಕು ದಿನಗಳಿಂದ ಹಳೆ ಪಲ್ಲೇಕಟ್ಟೆಯ ಶ್ರೀ ಉದ್ಭವ ಗಣಪತಿ ದೇವಸ್ಥಾನದ ಆವರಣದಡೆಗೆ ಮಕ್ಕಳು ಹೆಜ್ಜೆ ಹಾಕುತ್ತಿದ್ದು, ಮಕ್ಕಳ ಕಲರವದಿಂದ ಈ ಭಾಗದ ಅನೇಕ ಜನರು ಸಂತೋಷಗೊಂಡಿದ್ದಾರೆ. ಕಾರಣ ಕಂಪ್ಲಿ ಪುರಸಭೆಯ ನಗರೋತ್ಥಾನ ಹಂತ – 4 ರ ಯೋಜನೆ ಅಡಿಯಲ್ಲಿ ಮಕ್ಕಳ ಆಟಿಕೆಗಳ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ವಿಶಾಲವಾದ ಮರದ ನೆರಳಿನ ಕೆಳಗೆ ಮಕ್ಕಳು ಆಡಲು ಸಂತೋಷದಿಂದ ಈ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ರಜೆ ಬಿಡಲಿದ್ದು ರಜೆಯ ಮೋಜಿಗೆ ಈ ಪಾರ್ಕ್ ನಲ್ಲಿ ಹಾಕಿರುವ ದೈಹಿಕ ವ್ಯಾಯಾಮದ ಹಾಗೂ ಮಕ್ಕಳ ಆಟಿಕೆಗಳು ಆಕರ್ಷಣೀಯವಾಗಿವೆ. ಮಕ್ಕಳು ಸದಾ ಮೊಬೈಲ್ ಹಾಗೂ ಟಿ.ವಿ. ಯ ಆಕರ್ಷಣೆಗೆ ಒಳಗಾಗಿದ್ದು. ಪುರಸಭೆಯು ಈ ಉದ್ಯಾನವನವನ್ನು ಅಭಿವೃದ್ಧಿಗೊಳಿಸಿ ಮಕ್ಕಳ ಆಟಿಕೆಗಳನ್ನ ಅಳವಡಿಸಿದ್ದಕ್ಕೆ ಮೊಬೈಲ್ ಹಾಗೂ ಟಿ.ವಿ. ಯನ್ನು ಬಿಟ್ಟು ಈ ಕಡೆ ಮಕ್ಕಳು ಹೆಜ್ಜೆ ಹಾಕಿ ಆಟವನ್ನು ಆಡಿ ಖುಷಿಪಡುತ್ತಿದ್ದಾರೆ. ಮಕ್ಕಳ ಪಾಲಕರು ಕೂಡಾ ಈ ಭಾಗದಲ್ಲಿ ಯಾವುದೇ ಉದ್ಯಾನವನ ಇರಲಿಲ್ಲ ಈ ಭಾಗದ ಮಕ್ಕಳಿಗೆ ಉದ್ಯಾನವನ ಅಭಿವೃದ್ಧಿಗೊಳಿಸಿರುವುದು ಉತ್ತಮ ಕಾರ್ಯ ಎಂದು ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಹಾಗೂ ಶ್ರೀ ಉದ್ಭವ ಗಣಪತಿ ಸೇವಾ ಸಮಿತಿಯವರು ಕೂಡ ಪುರಸಭೆಯ ಅಧ್ಯಕ್ಷರಾದ ಭಟ್ಟ ಪ್ರಸಾದ ಎಲ್ಲಾ ಪುರಸಭಾ ಸದಸ್ಯರಿಗೂ ಹಾಗೂ ಮುಖ್ಯಧಿಕಾರಿ ಕೆ. ದುರುಗಣ್ಣ ಹಾಗೂ ಪುರಸಭಾ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಯಾನವನನ್ನು ಸ್ವಚ್ಛವಾಗಿಟ್ಟುಕೊಂಡು ಶಾಂತಿಯಿಂದ ಹಾಕಿರುವ ಆಟಿಕೆಗಳನ್ನು ಮುರಿಯಲಾರದೆ ಸದುಪಯೋಗ ಪಡಿಸಿಕೊಳ್ಳಲಿ ಎಂದು ನಮ್ಮ “ಕರುನಾಡ ಕಂದಪತ್ರಿಕೆ” ಆಶಯ.
ವರದಿ : ಜಿಲಾನ್ ಸಾಬ್ ಬಡಿಗೇರ