ಬಳ್ಳಾರಿ/ ಕಂಪ್ಲಿ : ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಿ, ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು ಎಂದು ಶಾಸಕ ಹೆಚ್. ಆರ್. ಗವಿಯಪ್ಪ ಹೇಳಿದರು.
ತಾಲೂಕು ಸಮೀಪದ ಗಾದಿಗನೂರು ಗ್ರಾಮದಲ್ಲಿ ಸುಮಾರು 354.12 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಕೆ.ಕೆ.ಆರ್.ಡಿ.ಬಿ ಯ ಕಲ್ಯಾಣ ಪಥ ಯೋಜನೆಯಡಿಯಲ್ಲಿ ಗಾದಿಗನೂರು ಗ್ರಾಮದಿಂದ ವಡ್ಡು ಗ್ರಾಮದವರೆಗಿನ 5.75 ಕಿ.ಮೀ ರಸ್ತೆವರೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು, ಹೆಗಡೆ ಗ್ರೂಪ್ ಆಫ್ ಕನ್ಸ್ಟ್ರಕ್ಷನ್ ನವರು ಇಲ್ಲಿನ ರಸ್ತೆ ಅಭಿವೃದ್ಧಿ ಮಾಡಲಿದ್ದಾರೆ. ಜನರು ರಸ್ತೆ ಅಭಿವೃದ್ಧಿಗೆ ಸಹಕರಿಸಿದರೆ, ಸುಂದರವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ನೀಡುತ್ತಿದ್ದು, ಇದರಿಂದ ಜನರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎಂದರು. ನಂತರ ಧರ್ಮಸಾಗರ, ಬೈಲುವದ್ದಿಗೇರಿ ಗ್ರಾಮದಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇ.ಇ ಮಧುಸುಧನ್ ಬಾಬು, ಸಹಾಯಕ ಇಂಜಿನೀಯರ್ ಸತೀಶ್, ಗುತ್ತಿಗೆದಾರ ಈಶ್ವರ ಹೆಗಡೆ, ಗಾದಿಗನೂರು ಪಿಡಿಒ ಚಿಕ್ಕಜಾಯಿಗನೂರು ಮಲ್ಲಿಕಾರ್ಜುನ, ಬೈಲುವದ್ದಿಗೇರಿ ಪಿಡಿಒ ಹನುಮಂತಪ್ಪ, ಮುಖಂಡರಾದ ಅಯ್ಯನಗೌಡ, ಕೆ.ಎಸ್.ಮಲಿಯಪ್ಪ, ಕೆ.ಎಂ.ಲೋಕೇಶಪ್ಪ, ದೇವೇಂದ್ರ, ತಿಮ್ಮಪ್ಪ, ಉಮೇಶ, ಜಂಭಯ್ಯ, ಕೆ.ಶಿವರಾಮಪ್ಪ, ಹಾಲಪ್ಪ, ಹೆಚ್.ಮಲ್ಲಿಕಾರ್ಜುನ, ಜೀನೂರ್ ಉಮೇಶ, ತಿಪ್ಪೇರುದ್ರ, ಸುರೇಶ, ಸಿ.ಚಂದ್ರಪ್ಪ, ಗಾದಿಲಿಂಗಪ್ಪ, ಸ್ವಾಮಿ, ತಾಯಪ್ಪ, ಶರಣ ಸೇರಿದಂತೆ ಜನಪ್ರತಿನಿಧಿಗಳು, ಗ್ರಾಮಸ್ಥರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ