ಬಳ್ಳಾರಿ/ ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಲಕ್ಷಿö ವೆಂಕಟರಮಣ, ಶ್ರೀ ಶನೈಶ್ಚರ ದೇವರ 43ನೇ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಲಕ್ಷ್ಮಿ ವೆಂಕಟರಮಣ, ಶನೈಶ್ಚರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಅಷ್ಟೋತ್ತರ, ಸಂಖ್ಯಾ ಶಂಖಾಭಿಷೇಕ, ಪುರುಷಸೂಕ್ತ, ಶ್ರೀ ಸೂಕ್ತ ಮಹಾಭಿಷೇಕ, ಅಷ್ಟೋತ್ತರ ನಾಮಾರ್ಚನೆ, ಮಹಾಗಣಪತಿ ಆದಿತ್ಯಾಧಿ ನವಗ್ರಹ ಸಹಿತ ಪುರುಷ ಸೂಕ್ತ, ಶ್ರೀಸೂಕ್ತ ನಾರಾಯಣ ಅಷ್ಟೋತ್ತರ ಸಂಖ್ಯಾ, ಶ್ರೀ ಲಕ್ಷ್ಮೀ ಅಷ್ಟೋತ್ತರ ಸಂಖ್ಯಾ, ಶ್ರೀ ಶನೈಶ್ಚರ ವೇದ ಮಂತ್ರಪೂರ್ವಕ ಅಷ್ಟೋತ್ತರ ಸಂಖ್ಯಾ ಮಹಾಮೃತ್ಯುಂಜಯ, ಮಹಾಮಂಗಳಾರತಿ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶ್ರೀ ಲಕ್ಶ್ಮೀ ವೆಂಕಟರಮಣ ಹಾಗೂ ಶ್ರೀ ಶನೈಶ್ಚರ ದೇವರ ಪ್ರತಿಮೆಗಳಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದರು. ಶ್ರೀ ಮನ್ನಾರಾಯಣ ಆಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ ಶ್ರೀ ಶನೈಶ್ಚರ ಮತ್ತು ಲಕ್ಷ್ಮಿ ವೆಂಕಟರಮಣ ಸ್ವಾಮಿಯನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥವೂ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶೀಧರ್, ಭಗವತಿ, ಅಶ್ವನಾರಾಯಣ, ಜಯಂತ್ ಶ್ರೀವತ್ಸ, ಅನಿರುದ್ಧ ಶಾಸ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ