ಯಾದಗಿರಿ/ ಗುರುಮಠಕಲ್: ತಾಲೂಕ ಪಂಚಾಯತ್ ಕಾರ್ಯಾಲಯದ ಅವರಣದಲ್ಲಿ ಇಂದು ತಾಲೂಕ ವಿಕಲ ಚೇತನರ ಕುಂದು ಕೊರತೆಯ ಕುರಿತಾಗಿ ಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರು , ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಅಂಬರೀಷ ಪಾಟೀಲ, ಉಪ ತಹಶೀಲ್ದಾರ್ ಶ್ರೀ ನರಸಿಂಹ ಸ್ವಾಮಿ, ತಾಲೂಕ ಆರೋಗ್ಯಧೀಕಾರಿಗಳು ಶ್ರೀ ಹಣಮಂತ ರೆಡ್ಡಿ, ADPRE ಶ್ರೀ ಶರಣಪ್ಪ ಮೈಲಾರಿ, ಶ್ರೀ ಪ್ರಕಾಶ ವಿರುಪಾಕ್ಷ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಯಾದಗಿರಿ APD ಶ್ರೀಮತಿ ಸಂಪ್ರುತ್ ದೇವಾಪುತ್ರ ಹಾಗೂ ಎಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು, ಜಿಲ್ಲಾ ವ್ಯವಸ್ಥಾಪಕರು ಎ.ಪಿ.ಡಿ ಸಂಸ್ಥೆ ಹಾಗೂ ಯಾದಗಿರಿ ತಾಲೂಕಿನ ವಿಕಲಚೇತನರನ್ನು ಎಮ್.ಆರ್.ಡಬ್ಲ್ಯೂ ಶ್ರೀ ಭೀಮರಾಯರವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು, ವಿಕಲಚೇತನರ ಕುಂದು-ಕೊರತೆ ಸಭೆ ಮಾಡುವ ಉದ್ದೇಶವೇನೆಂದರೆ, 2004ರಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಯಿತು. ಈ ಸಭೆಯ ಪ್ರಮುಖ ಉದ್ದೇಶವೇನೆಂದರೆ, ವಿಕಲಚೇತನರ ಕುಂದು-ಕೊರತೆ ಆಲಿಸಿ, ಶೀಘ್ರ ಪರಿಹಾರ ಕಲ್ಪಿಸುವುದು, ವಿವಿಧ ಇಲಾಖೆಯಿಂದ ಜಾರಿಗೊಳಿಸುವ ಯೋಜನೆಗಳನ್ನು ದೊರಕಿಸುವುದು ಹಾಗೂ ವಿಕಲಚೇತನರನ್ನು ಸರ್ವತೋಮುಖ ಅಭಿವೃಧಿಗಾಗಿ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ಪುನರ ಚೇತನ ಒಳಗೊಂಡಂತೆ ಈ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವುದು ಸಭೆಯ ಉದ್ದೇಶ ಎಂದು ತಿಳಿಸಿದರು.
2007-2008 ರಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆ ಜಾರಿಗೆ ಬಂದಿರುತ್ತದೆ. (V.R.W) (U.R.W) (M.R.W) ತಾಲೂಕ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಕೆಲಸದ ಕುರಿತು ವಿವರಿಸಲಾಯಿತು. ಇವರು ಉದ್ದೇಶ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸವಾಗಿರುವ ವಿಕಲಚೇತನರಿಗೆ ಭೇಟಿ ಮಾಡಿ ಮನೆ ಮನೆಗೆ ಸಮೀಕ್ಷೆಯನ್ನು ನಡೆಸುವುದು, ಸರಕಾರದಿಂದ ಸಿಗುವ ಸೌಲಭ್ಯಗಳು, ಮಾಹಿತಿ ನೀಡಿವುದು ಹಾಗೂ ಸೌಲಭ್ಯಗಳು ಒದಗಿಸಿಕೊಡುವುದು ಇಲಾಖೆ ಅಧಿಕಾರಿಗಳು ಮಾಹಿತಿ ಕೇಳಿದಾಗ ಮಾಹಿತಿ ಒದಗಿಸುವುದು. ಇವರ ಕರ್ತವ್ಯಯಾಗಿರುತ್ತದೆ ಎಂದು ಹೇಳಿದರು.
- (V.R.W) ಮತ್ತು (U.R.W) ಸರ್ವೇ ಮಾಡಿದ ಪ್ರಕಾರ ಗುರುಮಠಕಲ್ ತಾಲೂಕಿನಲ್ಲಿ ಯು.ಡಿ.ಐ.ಡಿ ಕಾರ್ಡ ಹೊಂದಿರುವ ವಿಕಲಚೇತನರು ಒಟ್ಟು 3789 ಜನರು ಇರುತ್ತಾರೆ. 187 ಯು.ಡಿ.ಐ.ಡಿ ಕಾರ್ಡ್ ಮಾಡಿಸಲು ಇನ್ನೂ ಅರ್ಜಿ ಬಂದಿವೆ ಎಂದು ಹೇಳಿದರು .
- ವಿಕಲಚೇತನರ ಸ್ವ-ಸಹಾಯ ಸಂಘಗಳು ಒಟ್ಟು 16 ವಿಕಲಚೇತನರ ಸಂಘಗಳು ರಚನೆಯಾಗಿರುತ್ತವೆ. ಹಾಗೂ ಆರೈಕೆದಾರರ ಸ್ವ-ಸಹಾಯ ಸಂಘಗಳು ರಚನೆಯಾಗಿವೆ
- ವಿಶಿಷ್ಟ ಗುರುತಿನಚೀಟಿ (UDID), ಶಾಲೆಯಲ್ಲಿ ಮಕ್ಕಳು ನೊಂದಣಿ ಮಾಡಿಸುವುದು. ವಿದ್ಯಾರ್ಥಿ ವೇತನ ಕೊಡಿಸುವುದು, ಶುಲ್ಕ ಮರುಪಾವತಿ ಕೊಡಿಸುವುದು, ಅಂಧರಿಗೆ ಟಾಕಿಂಗ್ ಲ್ಯಾಪ್ ಟಾಪ್, ಬ್ರೈಲ್ ಕಿಟ್, ಎಮ್ ಅರ್ ಕಿಟ್, ವಿವಾಹ ಪ್ರೋತ್ಸಾಹ ಧನ ನೀಡುವದು, ಮಾಸಿಕ ಪೋಷಣಾ ಭತ್ಯೆ, ರಿಯಾಯಿತಿ ದರದ ಬಸ್‌ಪಾಸ್, ರೈಲ್ವೆ ಪಾಸ್, ಗಾಲಿ ಕುರ್ಚಿ, ಟ್ರೈಸಿಕಲ್, ಶ್ರವಣ ಸಾಧನಗಳು, ಕೃತಕ ಕಾಲು, ಕೃತಕ ಕೆ. 75% ಪ್ರತಿ ಶತ ಹೊಂದಿರುವ ವಿಕಲಚೇತನರಿಗೆ ಯಂತ್ರ ಚಾಲಿತ ವಾಹನ, ಶೌಚಾಲಯ, ಎಲ್ಲಾ ಸರಕಾರಿ ಕಚೇರಿಗಳಲ್ಲಿ ramp ವ್ಯವಸ್ಥೆ ಮಾಡುವ ಕುರಿತು, ಇನ್ನು ಬೇರೆ ಇಲಾಖೆಯಿಂದ ಸಿಗುವ ಸೌಲಭ್ಯಗಳು ವಿಕಲಚೇತನರಿಗೆ ಒದಗಿಸಿಕೊಡಲಾಗುತ್ತದೆ, ವಿಕಲಚೇತನರ ವಿನಂತಿಯಂತೆ ಗುರುಮಠಕಲ್ ತಾಲೂಕಿನಲ್ಲಿ ವಿಕಲ ಚೇತನ ಭವನ, ಹೆಚ್ಚುವರಿ ಅನುದಾನ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನೆ ಮಾಡಲಾಗುವದು ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಅಂಬರೀಷ ಪಾಟೀಲ ತಿಳಿಸಿದರು.
ಇಂದಿನ ಸಭೆಗೆ ಗುರುಮಠಕಲ್ ತಾಲೂಕ ಪಂಚಾಯತ್ ವಿಷಯ ನಿರ್ವಾಹಕರಾದ ಶ್ರೀ ವಿದ್ಯಾಸಾಗರ ಕುಲಕರ್ಣಿ ಮತ್ತು ಶರಣಪ್ಪ ಚೌಹಣ, ಶ್ರೀ ನಾಗೇಶ, ತಾಲೂಕ Prd task force ವಿಕಲ ಚೇತನರ ಅಧ್ಯಕ್ಷ ಶ್ರೀ ಸಿದ್ದಣ್ಣ ಗೌಡ ನಜಾರಾಪುರ, ಎಲ್ಲಾ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗುರುಮಠಕಲ, ಚಂಡರಿಕಿ, ಚೆಪೆಟ್ಲಾ, ಮಿನಸಾಪುರ, ಪುಟಪಾಕ, ಕಂದಕೂರ, ಪಸ್ಪುಲ, ಗಾಜರಕೋಟ, ಕಾಳಬೆಳಗುಂದಿ ಹಾಗೂ ಉಳಿದ ಪಂಚಾಯತಗಳಿಂದ ಬಂದಿರುವ ವಿಕಲ ಚೇತನರು ಹಾಜರಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ವರದಿ ಜಗದೀಶ್ ಕುಮಾರ
