
ಗುರುಮಠಕಲ್/ ಬೋರಾಬಂಡಾ: ಪ್ರತಿ ವರ್ಷದಂತೆ ಈ ವರ್ಷವೂ ಸ್ವಸ್ತಿ ಶ್ರೀಮನೃಪ ಶ್ರೀ ಶಾಲಿವಾಹನ ಶಕೆ-1947 ವಿಶ್ವಾವಸು ನಾಮ ಸಂವತ್ಸರ, ಚೈತ್ರಮಾಸ ಶುಕ್ಲ ಪಕ್ಷ, ನವಮಿ, ಭಾನುವಾರ ದಿನಾಂಕ: 06-04-2025 ರಾಮನವಮಿ ಹಿನ್ನೆಲೆಯಲ್ಲಿ ಶ್ರೀ ಲಕ್ಷ್ಮೀತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ, ವ್ಯವಸ್ಥಾಪಕರು, ಹಿರಿಯ ಉದ್ಯಮಿಗಳಾದ ಶ್ರೀ ನರೇಂದ್ರ ರಾಠೋಡ್ ಮಾತನಾಡಿ ಪ್ರಭು ಶ್ರೀರಾಮನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಜೀವನದ ಸಾರ್ಥಕತೆ ದಿನಾಂಕ 06-04-2025 ಭಾನುವಾರ ಶ್ರೀ ರಾಮ ನವಮಿಯಂದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕುಟುಂಬದೊಂದಿಗೆ ರಾಮ ನವಮಿ ಉತ್ಸವದಲ್ಲಿ ಭಾಗವಹಿಸಲು ತಿಳಿಸಿದರು. ಈಗಾಗಲೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗಾಗಿ ಸುಕ್ಷೇತ್ರ ಬೋರಾಬಂಡಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು.
ಬೆಳಗ್ಗೆ 7:00 ಗಂಟೆಯಿಂದ ಶ್ರೀ ಶ್ರೀ ಶ್ರೀ ಲಕ್ಷ್ಮೀತಿಮ್ಮಪ್ಪ ದೇವರಿಗೆ ಪಂಚಾಮೃತಾಭಿಷೇಕ ಹಾಗೂ ಅಲಂಕಾರಸೇವಾ ಹಾಗೂ ಮಹಾಪೂಜೆ ಜರಗುವುದು.
ಬೆಳಿಗ್ಗೆ 9:00 ರಿಂದ 11:00 ಗಂಟೆಯವರೆಗೆ ಶ್ರೀ ರಾಮ ತಾರಕ ಹೋಮ, ಪೂರ್ಣಾಹುತಿ.
ವಿಶೇಷವಾಗಿ ಶ್ರೀ ರಾಮ ನವಮಿಯ ನಿಮಿತ್ಯ ಶ್ರೀ ರಾಮ 108 ಜಪ (ಶ್ರೀ ರಾಮರಕ್ಷಾಸ್ತೋತ್ರಮ್) ಮಂತ್ರ ಪಠಿಸಲು ಈಚ್ಛೆಯುಳ್ಳ ದಂಪತಿಗಳು ಬೆಳಗ್ಗೆ 9:00 ಗಂಟೆಗೆ ಪಾಲ್ಗೊಳ್ಳಲು ಯಾವುದೇ ಶುಲ್ಕವಿರುವುದಿಲ್ಲ, ದಂಪತಿಗಳು ಸಾಂಪ್ರದಾಯಿಕ ಸಮವಸ್ತ್ರವಾದ ಸೀರೆ, ಪಂಚೆ ಧರಿಸಿ ಬರಬೇಕು ಎಂದು ತಿಳಿಸಿದ್ದಾರೆ.
ಬೆಳಗ್ಗೆ 11-30 ರಿಂದ ರಥೋತ್ಸವ ಕಾರ್ಯಕ್ರಮ ಜರಗುವುದು.
ಮಧ್ಯಾಹ್ನ 12-00 ಗಂಟೆಗೆ ಅಭಿಜಿತ್ ಮೂಹೂರ್ತದಲ್ಲಿ ಶ್ರೀ ರಾಮ ದೇವರಿಗೆ ತೊಟ್ಟಿಲು ಸೇವಾ, ಉಂಜಲ ಸೇವೆ, ಅಷ್ಟಾವಧಾನ ಸೇವಾ, ಮಹಾಮಂಗಳಾರತಿ.
ಕಾರ್ಯಕ್ರಮದ ನಂತರ ವಿಶೇಷವಾಗಿ ಪ್ರಖ್ಯಾತ ಗಾಯಕರಾದ ದಿ||ಎಸ್.ಪಿ. ಬಾಲ ಸುಬ್ರಮಣ್ಯಂ ಅಭಿಮಾನಿ ಬಳಗದವರಿಂದ ನಾರಾಯಣಪೇಟ್ (ತೆಲಂಗಾಣ)ಸಾಯಂಕಾಲದ ವರೆಗೆ ಭಜನಾ ಕಾರ್ಯಕ್ರಮ ಜರಗುವುದು.
ಮಧ್ಯಾಹ್ನ 1-00 ಗಂಟೆಯಿಂದ ತೀರ್ಥಪ್ರಸಾದ ವಿತರಣೆ ಇರುವದು.
ರಾಮನವಮಿಯ ಶುಭ ಕಾರ್ಯಕ್ರಮದಲ್ಲಿ ಬೋರಾಬಂಡಾ ಮತ್ತು ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತರಲು ದೇವಸ್ಥಾನದ ಮತ್ತು ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀ ನರೇಂದ್ರ ರಾಥೋಡ್ ತಿಳಿಸಿದರು.
ವರದಿ: ಜಗದೀಶ್ ಕುಮಾರ್
