ಬಳ್ಳಾರಿ / ಕಂಪ್ಲಿ : ಏಪ್ರಿಲ್ ಕೊನೆತನಕ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಆಗ್ರಹಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿ, ಐಸಿಸಿ ನೀರಾವರಿ ಸಲಹಾ ಸಮಿತಿ ತುರ್ತಾಗಿ ನಡೆದ ಬೆಂಗಳೂರಿನ ವಿಧಾನಸೌಧದಲ್ಲಿ ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕೊಪ್ಪಳ ರಾಯಚೂರು ವಿಜಯನಗರ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಶಾಸಕರಗಳ ಹಾಗೂ ಎಲ್ಲಾ ರೈತ ಮುಖಂಡರ ಸಭೆಯನ್ನು ಮಾಡಲಾಗಿದ್ದು, ಸಭೆಯ ತೀರ್ಮಾನದಂತೆ ಏಪ್ರಿಲ್ 10ನೇ ತಾರೀಖಿನ ತನಕ ಪ್ರತಿದಿನ 450 ಕೂಸೆಕ್ಸ್ ನಂತೆ ತುಂಗಭದ್ರಾ ಬಲದಂಡೆ ಕೆಳಭಾಗದ ಕಾಲುವೆಗಳಿಗೆ ನೀರು ಹರಿಸಲು ಎಲ್ಲರೂ ಒಪ್ಪಿಕೊಂಡು ತೀರ್ಮಾನಿಸಿದ್ದರು. ಆದರೆ ಪ್ರಾದೇಶಿಕ ಆಯುಕ್ತರ ಆದೇಶದಂತೆ ಕೇವಲ ಏಪ್ರಿಲ್ 5ನೇ ತಾರೀಖಿನವರೆಗೆ ಮಾತ್ರ ನೀರು ಹರಿಸಲು ಆದೇಶಿಸಲಾಗಿದೆ. ಏಪ್ರಿಲ್ 10ನೇ ತಾರೀಕಿನವರೆ ನೀರು ಕೊಡದಿದ್ದ ಪಕ್ಷದಲ್ಲಿ ರೈತರ ಬೆಳೆಗಳು 25 ರಿಂದ 30 ರಷ್ಟು ನಷ್ಟವಾಗಲಿದೆ. ಪ್ರಾದೇಶಿಕ ಆಯುಕ್ತರು ಕಲಬುರ್ಗಿ ಹಾಗೂ ಐಸಿಸಿ ಸಲಹಾ ಸಮಿತಿಯ ಅಧ್ಯಕ್ಷರ ಆದೇಶಗಳು ಭಿನ್ನವಾಗಿದ್ದು, ಎರಡು ಆದೇಶಗಳು ರೈತರಿಗೆ ಗೊಂದಲ ಉಂಟಾಗಿದ್ದು, ಇದರ ಬಗ್ಗೆ ಸ್ಥಳೀಯ ಶಾಸಕರಾದ ಮಾನ್ಯ ಜೆ. ಎನ್. ಗಣೇಶ ಅವರ ಬಳಿ ರೈತರ ನಿಯೋಗ ಭೇಟಿಯಾದಾಗ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಏಪ್ರಿಲ್ 5ರ ನಂತರವೂ ನೀರು ಹರಿಸುವ ಭರವಸೆಯನ್ನು ನೀಡಿದ್ದಾರೆ. ಐಸಿಸಿ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ ಏಪ್ರಿಲ್ 10ರ ವೆರೆಗೆ ನೀರನ್ನು ಹರಿಸಬೇಕು, ಇಲ್ಲವಾದರೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಆನಂದ ರೆಡ್ಡಿ, ತಾಲೂಕು ಅಧ್ಯಕ್ಷ ವಿರೇಶ, ತಾಲೂಕು ಕಾರ್ಯಧ್ಯಕ್ಷರಾದ ಕೊಟ್ಟೂರ್ ರಮೇಶ, ಡಿ ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ, ತಾಲೂಕು ಗೌರವಾಧ್ಯಕ್ಷ ಆದೋನಿ ರಂಗಪ್ಪ, ತಾಲೂಕು ಉಪಾಧ್ಯಕ್ಷ ಕಾಗೆ ಈರಣ್ಣ, ಮುಖಂಡರಾದ ಟಿ. ಗಂಗಣ್ಣ, ತೌಸೀಫ್, ಅಕ್ಬರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
