ಬಳ್ಳಾರಿ : ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರ ಸಭೆ ದಿ. 4- 4- 2025 ರಂದು ನಡೆಯಿತು.
ಹಳೆ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಈ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ತಮ್ಮ ವಿದ್ಯಾಭ್ಯಾಸದ ವಿದ್ಯಾ ಸಂಸ್ಥೆಯೊಂದಿಗೆ ಇದ್ದಂತಹ ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅಂಬ್ಲಿ ಎಂಬ ವಿದ್ಯಾ ಸಂಸ್ಥೆ ಹರಪನಹಳ್ಳಿಯಲ್ಲಿ ಇಲ್ಲದಿದ್ದರೆ ಹರಪನಹಳ್ಳಿ ಶೈಕ್ಷಣಿಕವಾಗಿ ಬಡವಾಗಿ ಉಳಿಯುತ್ತಿತ್ತು ಆದರೆ ಇಂದು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಶೈಕ್ಷಣಿಕ ಶ್ರೀಮಂತಿಕೆ ಎಂಬ ಹೆಸರು ಪಡೆಯಲು ಈ ಮಹಾವಿದ್ಯಾಲಯದ ಮಹತ್ತರವಾದ ಪಾತ್ರವಿದೆ ಇಲ್ಲಿ ಕಲಿತಂತಹ 50,000 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತಮ್ಮದೇ ಆದ ವಿವಿಧ ರೂಪದಲ್ಲಿ ಶಿಕ್ಷಕರಾಗಿ, ವಕೀಲರಾಗಿ, ಪೊಲೀಸರಾಗಿ, ಪತ್ರಕರ್ತರಾಗಿ, ಹತ್ತಾರು ಹುದ್ದೆಗಳನ್ನು ಅಲಂಕರಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬ ಒಟ್ಟಾರೆ ಅಭಿಪ್ರಾಯವು ಹಳೆ ವಿದ್ಯಾರ್ಥಿಗಳ ಕಡೆಯಿಂದ ಬಂದಂತ ಒಂದು ಸ್ಪೂರ್ತಿದಾಯಕ ವಿಚಾರವಾಗಿದೆ, ಓದಿನೊಂದಿಗೆ ಕೌಶಲ್ಯಾಭಿವೃದ್ಧಿಯ ಬದುಕನ್ನು ಕಟ್ಟಿಕೊಳ್ಳಲು ಎಡಿಬಿ ಕಾಲೇಜು ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಕುಮಾರಿ ಶಿಲ್ಪ ಗೌಡರವರು ತಿಳಿಸಿದರು. ಅದರಂತೆ ವಕೀಲರಾದ ಸಿದ್ದಲಿಂಗನಗೌಡ ರವರು ಮೌಲ್ಯ ಆಧಾರಿತವಾದ ಉಪನ್ಯಾಸಕ ವರ್ಗವು ಈ ಮಹಾವಿದ್ಯಾಲಯದಲ್ಲಿದ್ದು ಆ ಉಪನ್ಯಾಸಕರ ಸ್ನೇಹ ಮಯ ವಾತಾವರಣವೇ ನಮ್ಮ ಸಾಮಾಜಿಕ ಬದುಕಿಗೆ ಭದ್ರ ಬನಾದಿ ಎಂದು ಅಭಿಪ್ರಾಯ ಹಂಚಿಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ ಮೋಹನ್ ರೆಡ್ಡಿ ಅವರು ಈ ಸಭೆಯಲ್ಲಿ ಪೋಷಕರ ಒಟ್ಟಾರೆ ಸಲಹೆ ಸೂಚನೆಗಳ ಅನ್ವಯ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ/ ಪಾಲಕ ಪೋಷಕರು ಹಾಗೂ ಗುರುಗಳು ಪಾತ್ರ ಬಹುಮುಖ್ಯವಾಗಿರುತ್ತದೆ ಆ ನಿಟ್ಟಿನಲ್ಲಿ ಪ್ರಾಮಾಣಿಕ ಶ್ರದ್ಧೆ, ನಿಷ್ಠೆ ಕಾಯಕ ಮನೋಭಾವ ಇದ್ದಾಗಲೇ ಒಂದು ಶೈಕ್ಷಣಿಕ ಸಂಸ್ಥೆ ಅಭಿವೃದ್ಧಿಯಾಗಲು ಮುಖ್ಯ ಕಾರಣ ಎಂದರು. ಆಡಳಿತ ಮಂಡಳಿ ಹಾಗೂ ವೀರಶೈವ ವಿದ್ಯಾವರ್ಧಕ ಸಂಘವು ಸುಮಾರು 110 ವರ್ಷಗಳಿಂದ ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಾ ರಾಜ್ಯಕ್ಕೆ ಮಾದರಿಯಾದ ಸಂಘ ಎಂದು ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದ ಸಂಚಾಲಕರಾದ ಡಾ. ಡಿ ತಿಪ್ಪೇಸ್ವಾಮಿ ರವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿದ್ದಲಿಂಗ ಮೂರ್ತಿರವರು ಉಪಸ್ಥಿತರಿದ್ದು ಕಾಲೇಜಿನ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಸ್ನೇಹಮಯ ಸಂಪರ್ಕದ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸೇತುವೆ ಆಗಿದ್ದಾರೆ ಎಂದು ಅಭಿನಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಡಾಕ್ಟರ್ ಅಣ್ಣೇಶ್ ರವರು ನಿರ್ವಹಿಸಿದರು. ಪ್ರಾರ್ಥನೆ ಕಾಲೇಜಿನ ಹಳೆಯ ವಿದ್ಯಾರ್ಥಿ ಮದನ್ ಕುಮಾರ್ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ಭಾಗವಹಿಸಿದ್ದರು.
- ಕರುನಾಡ ಕಂದ




















