ಬಳ್ಳಾರಿ / ಕಂಪ್ಲಿ : ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಎ. ಸಿ. ದಾನಪ್ಪರವರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಟ್ರಸ್ಟ್ ಅಧ್ಯಕ್ಷ ಯು. ಜಿಲಾನ (ಅಕ್ಕಿ ಜಿಲಾನ) ಮಾತನಾಡಿ, ದೀನ ದಲಿತರ ಅಭಿವೃದ್ಧಿಗಾಗಿ ಸದಾ ಯೋಚಿಸುವ ಎ. ಸಿ. ದಾನಪ್ಪರವರಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ಮತ್ತು ಮೇಲುಸ್ತುವಾರಿಗಾಗಿ ರಚಿಸಿರುವ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಗೆ ರಾಜ್ಯ ಸದಸ್ಯರಾಗಿದ್ದಾರೆ ಜನರ ಸೇವೆ ಮಾಡುವ ಇನ್ನಷ್ಟು ಪದವಿಗಳು ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಚಾಲಕ ಬಡಿಗೇರ್ ಜಿಲಾನ್ ಸಾಬ್, ಉಪಾಧ್ಯಕ್ಷ ಹಾಜಿ ಎಸ್. ಕೆ. ಇಂತಿಯಾಜ್, ಆರ್ ಸುಭಾನ್, ಆರ್ ಜಿಲಾನ್, ಮೈನುದ್ದೀನ್, ಎನ್ ಮೌಲ ಹುಸೇನ್, ಎ .ಎಸ್. ಯಲ್ಲಪ್ಪ, ಗಾದಿಲಿಂಗಪ್ಪ, ಎನ್. ಮೆಹಬೂಬ್, ಮೈನುದ್ದೀನ್ ಮುಸ್ತಾಫ, ನಿಸಾರದ್ದೀನ್ , ರಿಯಾಜ್, ಸೇರಿದಂತೆ ಇತರರು ಇದ್ದರು.
ವರದಿ : ಬಡಿಗೇರ್ ಜಿಲಾನ್ ಸಾಬ್.
