ಗದಗ ಜಿಲ್ಲೆಯ ರೋಣ ತಾಲೂಕು ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಉಗ್ರ ಸ್ವರೂಪಿನಿಯರಾದ ಶ್ರೀ ಕೆಂಚಮ್ಮದೇವಿ ಮತ್ತು ಶ್ರೀ ಮರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಇದೆ ಸೋಮವಾರದಿಂದ ಗುರುವಾರದವರೆಗೆ ವಿವಿಧ ಧಾರ್ಮಿಕ ಸಮಾರಂಭಗಳಿಗೆ ಜಕ್ಕಲಿಗ್ರಾಮ ಸಾಕ್ಷಿಯಾಗಲಿದೆ ಈ ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು 07-04-2025 ಸೋಮವಾರದಂದು ಅಮ್ಮನವರು ಹೊಳೆಗೆ ಸ್ನಾನಕ್ಕೆ ಹೋಗುವುದು. ದಿ. 08-04-2025 ಮಂಗಳವಾರ ರಂದು ಅಮ್ಮನವರು ಗ್ರಾಮಕ್ಕೆ ಆಗಮನ ಮತ್ತು ಅಭಿಷೆಕ ಹಾಗೂ ಮಹಾ ಪ್ರಸಾದ ದಿ 09-04-2025 ಬುಧವಾರ ದಂದು ಮಹಾ ಪ್ರಸಾದ, 10-04-2025 ಗುರುವಾರ ದಂದು ಅಮ್ಮನವರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಸಂಚಾರ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ
ಅದೇ ರೀತಿ ದಿನಾಂಕ 10-04-2025 ರಾತ್ರಿ 8-00 ರಂದು ಗಾನ ಗಂಧರ್ವ ಮೆಲೋಡಿಸ್ ರವರಿಂದ ರಸ ಮಂಜರಿ ಕಾರ್ಯಕ್ರಮ, ಅಂಬೇಡ್ಕರ್ ನಗರದಲ್ಲಿ ಅದ್ದೂರಿಯಾಗಿ ನೆಡೆಯಲಿದೆ
ಈ ಸಮಾರಂಭಕ್ಕೆ ಜಕ್ಕಲಿ ಗ್ರಾಮದ ಗುರು ಹಿರಿಯರು, ಯುವಕ ಮಿತ್ರರು ಸ್ವಾಗತ ಕೋರಿದ್ದಾರೆ
ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರು ಉಪಸ್ಥಿತರಿದ್ದು ಆ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ.
- ಕರುನಾಡ ಕಂದ
