ಬಳ್ಳಾರಿ / ಕಂಪ್ಲಿ : ಮಾದಿಗ ಸಮುದಾಯದ ಯುವ ಮುಖಂಡರಾದ ಮೆಟ್ರಿಯ ಹೆಚ್. ಕುಮಾರಸ್ವಾಮಿಯವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಠ ಜಾತಿ ಒಳಮೀಸಲಾತಿ ವರ್ಗೀಕರಣ ಸಂಬಂಧ ರಾಜ್ಯದ ಪರಿಶಿಷ್ಠ ಜಾತಿಯಲ್ಲಿರುವ 101 ಜಾತಿಯ ಜನರುಗಳ ಮನೆಬಾಗಿಲಗಳಿಗೆ ಸರಕಾರದಿಂದ ನೇಮಿಸಿರುವ ಗಣತಿದಾರರು ಬರುವರು. ಪ್ರತಿ ಕೌಟುಂಬಿಕ , ಶೈಕ್ಷಣಿಕ , ಸಾಮಾಜಿಕ , ಆರ್ಥಿಕ , ಉದ್ಯೋಗ / ಔದ್ಯೋಗಿಕ ಇತ್ಯಾದಿಗಳು ಸಮೀಕ್ಷೆ/ ಜಾತಿ ಗಣತಿ ಕೆಲವೇ ದಿನಗಳಲ್ಲಿ ಮಾಡುವರು. ಆದ್ದರಿಂದ ಪ.ಜಾತಿಯಲ್ಲಿರುವ 101 ಜಾತಿಯ ಸಮುದಾಯದವರು ಅತ್ಯಂತ ಮುತುವರ್ಜಿಯಿಂದ ಖಡ್ಡಾಯವಾಗಿ ಮರೆಯದೆ ಸಹಕಾರದಿಂದ ಸರಕಾರಿ ಅಧಿಕಾರಿಗಳು / ಗಣತಿದಾರರಿಗೆ/ ಸಿಬ್ಬಂದಿಗೆ ನಿಮ್ಮ ಕೌಟುಂಬಿಕ , ಶೈಕ್ಷಣಿಕ , ಆರ್ಥಿಕ , ಸಾಮಾಜಿಕ , ಔದ್ಯೋಗಿಕವಾಗಿ, ಇತ್ಯಾದಿಗಳ ಅಂಶಗಳಿಗೆ ದಾಖಲಿಸಲು ನೆರವಾಗಬೇಕೆಂದು ತಿಳಿಸಿದರು. ಆಧಾರ , ರೇಷನ್ ಕಾರ್ಡ , ಪಾನ್ ಕಾರ್ಡ್ , ಓದಿರುವ ಪ್ರಮಾಣಪತ್ರಗಳು, ಬ್ಯಾಂಕ್ ಪಾಸ್ ಪುಸ್ತಕ , ಗ್ಯಾಸ್ ಸಿಲಿಂಡರ್ ಕಾರ್ಡ್ , KPTCL ಮೀಟರ್ ಬಿಲ್ಲು , ಗುರುತಿನ ಪತ್ರ, APL / BPL etc ಕಾರ್ಡ್ ಇತ್ಯಾದಿಗಳು ಕುಟುಂಬದ ಮೂಲ ದಾಖಲಾತಿ ಪ್ರಮಾಣಪತ್ರಗಳನ್ನು ಗಣತಿದಾರರಿಗೆ ಮಾಹಿತಿ ನೀಡಬೇಕು. ಜಾತಿ ಕಾಲಂ ನಲ್ಲಿ ಹರಿಜನ ಅಂತಾ ಬರೆಸಬಾರದು ಮಾದಿಗ ಅಂತಾ ಬರೆಸಬೇಕು ಮಾದಿಗ ಅಂತ ಮಾಹಿತಿ ಕೊಡುವುದರಿಂದ ನಮ್ಮ ಜನಾಂಗದ ಮಕ್ಕಳಿಗೆ ಎಲ್ಲಾ ಇಲಾಖೆಗಳಲ್ಲಿ ಉದ್ಯೋಗ ಸಿಗುವ ಅವಕಾಶಗಳು ಇರುತ್ತವೆ. ಮಾದಿಗ ಜಾತಿ ಹೇಳುವುದನ್ನು ಮುಚ್ಚಿಟ್ಟರೆ ನಮ್ಮ ಮುಂದಿನ ಮಕ್ಕಳಿಗೆ ಭವಿಷ್ಯಕ್ಕೆ ಕುಂಠಿತವಾಗುತ್ತದೆ ಎಂದು
ಮನವಿ ಮಾಡಿದರು. ಕಂಪ್ಲಿ ಕ್ಷೇತ್ರದ ಎಲ್ಲಾ ಮಾದಿಗ ಸಮಾಜದವರು ಗಣತಿ ಸಂದರ್ಭದಲ್ಲಿ ಮಾದಿಗ ಜಾತಿ ಬರೆಸಲು ಮನವಿಯನ್ನು ಮಾಡಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
