ಯಾದಗಿರಿ/ ಗುರುಮಠಕಲ್: ಇಂದು ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ಒಟ್ಟು 10863 ವಿಧ್ಯಾರ್ಥಿಗಳ ಪೈಕಿ 4704 ವಿದ್ಯಾರ್ಥಿಗಳು ಶೇಕಡ, 43.30% ದೊಂದಿಗೆ ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶಗಳಲ್ಲಿ 8697 ವಿದ್ಯಾರ್ಥಿಗಳ ಪೈಕಿ 3746 ವಿದ್ಯಾರ್ಥಿಗಳು ಶೇಕಡ 43.07% ಉತ್ತೀರ್ಣರಾಗಿದ್ದಾರೆ.
ಇನ್ನೂ ಬಾಲಕರು 5350 ವಿದ್ಯಾರ್ಥಿಗಳ ಪೈಕಿ 1865 ಉತ್ತೀರ್ಣರಾಗಿದ್ದರೆ, ಬಾಲಕಿಯರು 5513 ವಿದ್ಯಾರ್ಥಿನಿಯರ ಪೈಕಿ 2839 ಉತ್ತೀರ್ಣರಾಗಿದ್ದಾರೆ.
ಎಲ್ಲಾ ಕ್ಷೇತ್ರದಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಗುರುಮಠಕಲ್ ತಾಲೂಕ ಸ್ವಾಮಿ ವಿವೇಕಾನಂದ ಪಿ ಯು ಕಾಲೇಜಿನ ಲಕ್ಷ್ಮೀ ಗಂಗಪ್ಪ 570 ಅಂಕದೊಂದಿಗೆ ಜಿಲ್ಲೆಗೆ 6 ನೇಯ ಮತ್ತು ಸರಕಾರಿ ಬಾಲಕಿಯರ ಪಿಯುಸಿ ಕಾಲೇಜಿನ ಕಲಾ ವಿಭಾಗದ ಅನುಷಾ ನಾರಾಯಣ 562 ಅಂಕ ಪಡೆದು 9 ನೇಯ ಸ್ಥಾನ ಪಡೆದಿದ್ದಾರೆ.
ವರದಿ: ಜಗದೀಶ್ ಕುಮಾರ್
