ಬಳ್ಳಾರಿ / ಕಂಪ್ಲಿ : ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನವಾಗಿ ನಾಲ್ವರ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಜಿ ಎನ್ ಧನಲಕ್ಷ್ಮಿ ಆದೇಶ ಹೊರಡಿಸಿದ್ದಾರೆ. ಕೃಷಿ ಮಾರುಕಟ್ಟೆ ಸಚಿವರ ಆದೇಶದಂತೆ ಕಂಪ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಂಪಾದೇವನಹಳ್ಳಿ ಗುರುಮೂರ್ತಿ ಕಂಪ್ಲಿ ಪಟ್ಟಣದ ಸುರೇಶ್ ಬಾಬು ಜಿ. ಕಂಪ್ಲಿ ಕೋಟೆಯ ಟಿ. ಲಕ್ಷ್ಮಿದೇವಿ ಕಂಪ್ಲಿ ಪಟ್ಟಣದ ಎಂ. ಗೋಪಾಲ ಇವರನ್ನು ಸಮಿತಿಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಅಧ್ಯಕ್ಷರಾದ ಎನ್. ಹಬೀಬ್ ರೆಹಮಾನ್ ಉಪಾಧ್ಯಕ್ಷರಾದ ಇಟಗಿ ಶರಣಬಸವ ಹಾಗೂ ಸದಸ್ಯರು ನೂತನ ನಾಮನಿರ್ದೇಶನಗೊಂಡ ಸದಸ್ಯರನ್ನು ಸ್ವಾಗತಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಹಬೀಬ್ ರೆಹಮಾನ್ ನಮ್ಮದು ನೂತನ ಎಪಿಎಂಸಿ ಆಗಿರುವ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ಸಿಸಿ ರಸ್ತೆ ಜಂಗಲ್ ಕಟಿಂಗ್ ದೀಪಗಳ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲಾಗಿದೆ. ಎಪಿಎಂಸಿ ಆಸ್ತಿ ರಕ್ಷಣೆಗೆ ಸುತ್ತ ರಕ್ಷಣಾ ಗೋಡೆ ಅಗತ್ಯವಿದ್ದು, ಕೋಟ್ಯಾಂತರ ರೂಪಾಯಿಗಳ ಅನುದಾನದ ಅಗತ್ಯವಿರುವುದರಿಂದ ಶಾಸಕರು ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಪಿಎಂಸಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಮೇಲ್ವಿಚಾರಕ ಎಂ. ಶುಕುರಸ್ವಾಮಿ, ಸಿಬ್ಬಂದಿಗಳಾದ ಬಡಿಗೇರ ಗೌಸ್ ಮುಖಂಡರಾದ ಕಾಮರೆಡ್ಡಿ ಚಂದ್ರಶೇಖರ, ಕಾಮರೆಡ್ಡಿ ಸುರೇಶ, ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
