ಬಳ್ಳಾರಿ / ಕಂಪ್ಲಿ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಮೂರು ವಿಭಾಗಗಳಾದ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ವಿಭಾಗಗಳಲ್ಲಿ ಮೂರು ವಿದ್ಯಾರ್ಥಿನಿಯರು ಶೇಕಡ 90ಕ್ಕಿಂತ ಅಧಿಕ ಅಂಕಗಳನ್ನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಲಾ ವಿಭಾಗದಲ್ಲಿ 49.66 %ರಷ್ಟು ವಾಣಿಜ್ಯ ಭಾಗದಲ್ಲಿ 80% ಹಾಗೂ ವಿಜ್ಞಾನಿ ಭಾಗದಲ್ಲಿ 72.38 % ರಷ್ಟು ಫಲಿತಾಂಶವನ್ನು ತರುವ ಮೂಲಕ ಕೀರ್ತಿಯನ್ನು ತಂದಿದ್ದಾರೆಂದು ಪ್ರಾಚಾರ್ಯ ತಿಳಿಸಿದರು. ಅವರು ಮಂಗಳವಾರ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಲೇಜಿನ ಮೂರು ವಿಭಾಗಗಳಾದ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಒಟ್ಟು ಪರೀಕ್ಷೆಗೆ 354 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 230 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 64.97ರಷ್ಟು ಫಲಿತಾಂಶವನ್ನು ತಂದಿದ್ದಾರೆ. ಕಲಾ ವಿಭಾಗದಲ್ಲಿ 149 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 49.66 ರಷ್ಟು ವಾಣಿಜ್ಯ ಭಾಗದಲ್ಲಿ 100 ವಿದ್ಯಾರ್ಥಿಗಳ ಪೈಕಿ 84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 80 %ಮತ್ತು ವಿಜ್ಞಾನಿ ವಿಭಾಗದಲ್ಲಿ 105 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 72.38 ರಷ್ಟು ಫಲಿತಾಂಶವನ್ನು ಪಡೆದಿದ್ದಾರೆ. ಕಲಾವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಉನ್ನತ ಶ್ರೇಣಿ 45 ವಿದ್ಯಾರ್ಥಿಗಳು ಪ್ರಥಮ, 17 ವಿದ್ಯಾರ್ಥಿಗಳು ದ್ವಿತೀಯ 8 ವಿದ್ಯಾರ್ಥಿಗಳು ತೃತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ 10, ಪ್ರಥಮ 52, ದ್ವಿತೀಯ ದ್ವಿತೀಯ 17, ಮತ್ತು ಒಂದು ತೃತೀಯ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ 18 ಪ್ರಥಮ 50 ದ್ವಿತೀಯ ಆರು ಮತ್ತು ತೃತೀಯ ಸ್ಥಾನದಲ್ಲಿ ಇಬ್ಬರು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಎಚ್ ಐಶ್ವರ್ಯ ಆರುನೂರಕ್ಕೆ 546 91% ವಾಣಿಜ್ಯ ಭಾಗದಲ್ಲಿ ನಾಗರತ್ನ ಸಿ 600 ಕ್ಕೆ 566 94.33 ರಷ್ಟು ವಿಜ್ಞಾನಿ ಭಾಗದಲ್ಲಿ ಹೆಚ್ ಪದ್ಮಾವತಿ 600 ಕ್ಕೆ 566 94.33 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ತಿಳಿಸಿದರು.
ಎಸ್ ಎಂ ಸರಕಾರಿ ಪದವಿ ಪೂರ್ವ ಕಾಲೇಜು
ಪಟ್ಟಣದ ಎಸ್ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟಾರೆ 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 30ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಏ ಚಂದ್ರಶೇಖರ ತಿಳಿಸಿದರು. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 35% ಕಲಾ ವಿಭಾಗದಲ್ಲಿ 26% ಮತ್ತು ವಾಣಿಜ್ಯ ಭಾಗದಲ್ಲಿ 40% ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
