ವಿಜಯನಗರ ಜಿಲ್ಲೆಯ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ 600 ಕ್ಕೆ 597 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿಯ ಗುಂಡ ಸ್ಟೇಷನ್ ಎಂಬ ಪುಟ್ಟ ಗ್ರಾಮದ “ಸಂಜನಾಬಾಯಿ” ಅವರ ಕುಟುಂಬಕ್ಕೆ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರು ಎನ್ ಟಿ ಶ್ರೀನಿವಾಸ್ ಅವರು ಇಂದು ಭೇಟಿ ನೀಡಿ 25,000 ನಗದು ಹಾಗೂ ಲ್ಯಾಪ್ಟಾಪ್ ನೀಡಿ, ನಮ್ಮ ಜಿಲ್ಲೆಗೆ ಉತ್ತಮವಾದ ಗೌರವ ತಂದಿದ್ದಾರೆ ಹಾಗೂ ಮುಂದಿನ ವಿದ್ಯಾಭ್ಯಾಸವು ಉತ್ತಮವಾಗಿರಲಿ ಎಂದು ಶುಭ ಹಾರೈಸಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕರು ಮಾತನಾಡುತ್ತಾ ತಂದೆ ತಾಯಿ ಇಂತಹ ಮಕ್ಕಳನ್ನು ಪಡೆದ ನೀವು ಪುಣ್ಯವಂತರು ಹಾಗೂ ಅವರ ಜೀವನಕ್ಕೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ತೊಂದರೆ ಆಗದಂತೆ ಅವರಿಗೆ ಶಿಕ್ಷಣ ಸಿಗಲಿ ಹಾಗೂ ಮುಂದೆ ಒಂದಲ್ಲ ಒಂದು ದಿನ ಒಂದು ದೊಡ್ಡ ಸಾಧನೆ ಮಾಡುತ್ತಾರೆ ಅವರಿಗೆ ಯಾವಾಗಲೂ ಶಿಕ್ಷಣದ, ಶಿಕ್ಷಕರ ಜೊತೆ ಪೋಷಕರ ಬೆಂಬಲವಿದ್ದರೆ ಮಕ್ಕಳು ಏನನ್ನಾದರೂ ಸಾಧಿಸಲು ಮುಂದಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು, ಯುವಕರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
