ಕಲಬುರಗಿ: ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುವುದರಿಂದ ನಿರೋದ್ಯೋಗ ಯುವಕ ಯುವತಿಯರಿಗೆ ತುಂಬಾ ಅನುಕೂಲ ಆಗಿದೆ. ಸ್ಥಳದಲ್ಲೇ 1500 ಯುವಕ, ಯುವತಿಯರಿಗೆ ಆದೇಶ ಪತ್ರವನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ನ ಪರಿಶಿಷ್ಠ ಜಾತಿ ವಿಭಾಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲೂರ ಹರ್ಷ ವ್ಯಕ್ತಪಡಿಸಿದ್ದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಉದ್ಯೋಗ ಮೇಳದಲ್ಲಿ ಸುಮಾರು 30,000 ಜನ ನಿರುದ್ಯೋಗಿಗಳು ಭಾಗವಹಿಸಿದ್ದರು. ಈ ಭಾಗ ಅತೀ ಹಿಂದುಳಿದ ವರ್ಗ ಪ್ರದೇಶವಾಗಿದ್ದರಿಂದ ಈ ಭಾಗದಲ್ಲಿರುವ ಎಲ್ಲಾ ಸಮಾಜದವರನ್ನು ಒಳಗೊಂಡು ಇಲ್ಲಿ ಇರತಕ್ಕಂತಹ ಹಿಂದುಳಿದ ಅಲ್ಪಸಂಖ್ಯಾತ, ಮತ್ತು ಎಸ್ ಸಿ ಎಸ್ ಟಿ ಓಬಿಸಿ ಅತೀ ಹೆಚ್ಚು ಕಡು ಬಡವರಾಗಿ ಇರುವುದರಿಂದ ಇವರಿಗೆ ಜಮೀನು ಅಲ್ಪ ಸ್ವಲ್ಪ ಇರುವುದರಿಂದ ಇವರಿಗೆ ಉದ್ಯೋಗವನ್ನು ಅತೀ ಕಡಿಮೆ ಇದ್ದಂತ ಜನಾಂಗಕ್ಕೆ ನಿರುದ್ಯೋಗ ಸಮಸ್ಯೆ ಅತೀ ಹೆಚ್ಚಾಗಿತ್ತು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಜೀವನ ನೀಡಿದಂತಹ ಕರ್ನಾಟಕ ಸರಕಾರ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಹೊಸ ಹೆಜ್ಜೆ ಇಡುತ್ತಿರುವುದು ಸಂತದ ವಿಷಯವಾಗಿದೆ ಎಂದರು.
ಇದನ್ನು ಅರ್ಥ ಮಾಡಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಇದೇ 16 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುತ್ತಾರೆ. ಇದಕ್ಕೆ ಸಹಕರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಶರಣ ಪ್ರಕಾಶ ಪಾಟೀಲ, ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಂತ್ರಿ ಡಿ.ಕೆ ಶಿವಕುಮಾರ,ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ,ಅಲ್ಲಮಪ್ರಭು ಪಾಟೀಲ, ಶರಣಬಸಪ್ಪ ದರ್ಶನಾಪೂರ, ಅಜಯ ಸಿಂಗ್, ಖನಿಜ ಫಾತಿಮಾ,ಬಿ ಆರ್ ಪಾಟೀಲ,ಎಂ.ವೈ ಪಾಟೀಲ,ಬಾಬುರಾವ ಚಿಂಚನಸೂರ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಹಾಗೂ ಶಾಸಕರು,ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಈ ಉದ್ಯೋಗ ಮೇಳಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ
