
ದಕ್ಷಿಣ ಕನ್ನಡ / ಬಪ್ಪನಾಡು : ಕಣ್ಮನ ಸೆಳೆಯುವ ದುರ್ಗಾಪರಮೇಶ್ವರಿ ಜಾತ್ರೆಗೆ ಲಕ್ಷೋಪಾದಿಯಲ್ಲಿ ಭಕ್ತಾದಿಗಳು ಸೇರಿದ್ದರು.
ಹಿನ್ನಲೆ :
ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿರುವ ಮೂಲ್ಕಿಯ ಶಾಂಭವಿ ನದಿ ತಟದಲ್ಲಿ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಳವಿದೆ.
ಶಾಂಭವಿ ಹೊಳೆಯಲ್ಲಿ ಲಂಗರು ಹಾಕಿದ್ದ ಹಡಗಿನ ಲಂಗರು ಮೇಲಕ್ಕೆಳೆಯುವಾಗ ಅದರಲ್ಲಿ ರಕ್ತ ಕಾಣಿಸಿಕೊಂಡಿತು. ಇದರಿಂದ ಹಡಗಿನ ಮಾಲೀಕ ಬಪ್ಪ ಬ್ಯಾರಿ ಚಿಂತಾಕ್ರಾಂತನಾದ. ಆತನ ಕನಸಿನಲ್ಲಿ ಕಾಣಿಸಿಕೊಂಡ ಶ್ರೀ ದುರ್ಗೆಯು ಇಲ್ಲಿ ದೇಗುಲ ನಿರ್ಮಿಸುವಂತೆ ಕೇಳಿಕೊಂಡಳು – ಎಂಬುದು ಜನಪದ ಕತೆ.
ಮುಂದೆ ಬಪ್ಪ ಬ್ಯಾರಿ ಈ ದೇಗುಲ ಕಟ್ಟಿದನಂತೆ. ಇದಕ್ಕೆ ಪೂರಕವಾಗಿ ಇಂದಿಗೂ ಬಪ್ಪ ಬ್ಯಾರಿ ನೆಲೆಸಿದ ಮನೆತನಕ್ಕೆ ಬಪ್ಪನಾಡು ಶ್ರೀ ದುರ್ಗೆ ರಥದಲ್ಲಿ ತೆರಳಿ ಪ್ರಸಾದ ವಿತರಿಸುವ ಕಾರ್ಯಕ್ರಮ ಅನೂಚಾನವಾಗಿ ನಡೆದುಬಂದಿದೆ. ಅಲ್ಲದೆ ಇಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುತ್ತಾರೆ.
ಮಹಾ ರಥೋತ್ಸವ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ತೇರು ಮುರಿದು ಅವಘಡ. ತೇರಿನ ಮೇಲ್ಭಾಗ ಏಕಾಏಕಿ ಕುಸಿತ. ತೇರಿನ ಮೇಲ್ಭಾಗ ಕುಸಿಯುವ ವೇಳೆ ತೇರಿನಲ್ಲೇ ಇದ್ದ ಅರ್ಚಕರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಧ್ಯರಾತ್ರಿ 1.40ರ ಸುಮಾರಿಗೆ ವೇಳೆ ನಡೆದಿರುವ ಘಟನೆ. ಬಳಿಕ ಚಂದ್ರಮಂಡಲ ತೇರಿನಲ್ಲಿ ಉತ್ಸವ ಮುಂದುವರಿಯಿತು.
ವರದಿ : ಜಿಲಾನಸಾಬ್ ಬಡಿಗೇರ್.
