ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಚಿವ ಸಂಪುಟ ಸಭೆಯ ಸ್ಥಳ ಪರಿಶೀಲನೆ

ಚಾಮರಾಜನಗರ/ ಹನೂರು: ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಸ್ಥಳವನ್ನು ತಜ್ಞರ ಅಭಿಪ್ರಾಯ ಮೇರೆಗೆ ದೀಪದ ಗಿರಿ ಒಡ್ಡಿನಲ್ಲಿ 108 ಅಡಿ ಪ್ರತಿಮೆ ಆವರಣದ ಬದಲಾಗಿ ನೂತನ 376 ವಸತಿ ಗೃಹದ ಮುಂಭಾಗದ ಖಾಲಿ ನಿವೇಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಆವರಣದ ದೀಪದ ಗಿರಿ ಒಡ್ಡಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ತಜ್ಞರ ಅಭಿಪ್ರಾಯ ಮೇರೆಗೆ ಸ್ಥಳ ಬದಲಾಯಿಸಲಾಗಿದೆ.

ದೀಪದ ಗಿರಿ ಒಡ್ಡು ತುಂಬಾ ಎತ್ತರ ಇರುವುದರಿಂದ ಆ ಸ್ಥಳದಲ್ಲಿ ವಿಪರೀತ ಗಾಳಿ ಬೀಸುವ ಕಾರಣದಿಂದ ಸಭೆ ನಡೆಸಲು ತೊಡಕುಂಟಾಗಬಹುದೆಂದು ಜೊತೆಗೆ ಮಳೆ ಸಂದರ್ಭದಲ್ಲಿ ಈ ಸ್ಥಳವು ಸೂಕ್ತವಲ್ಲ ಅದಲ್ಲದೆ ಇಲ್ಲಿ ಕಲ್ಲು ಮಣ್ಣು ಮಿಶ್ರಿತವಾಗಿರುವುದರಿಂದ ಸಭೆ ಮಾಡಲು ಹಾಕಲಾಗುವ ಶಾಮಿಯಾನಗಳು ಬಿಗಿ ಇರುವುದಿಲ್ಲ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ನೂತನ 376 ಕೊಠಡಿಯ ಮುಂಭಾಗ ಸಭೆಗೆ ಬರುವ ವಾಹನಗಳನ್ನು ನಿಲ್ಲಿಸಲು ಆಯೋಜಿಸಲಾಗಿತ್ತು, ಇಂದು ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗಿದ್ದು, ವಾಹನಗಳ ನಿಲುಗಡೆಯನ್ನು ನೂತನ ವಸತಿ ಗೃಹದ ಹತ್ತಿರ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್, ಡಿ.ವೈ ಎಸ್. ಪಿ ಧರ್ಮೇಂದ್ರ, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನನ್, ಮಹದೇವಸ್ವಾಮಿ, ಮುಖಂಡರುಗಳಾದ ರಾಜು ಗೌಡ್, ಡಿ. ಕೆ. ರಾಜು,ವಿಜಯ್ ಕುಮಾರ್ ,ಸುರೇಶ್ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ