ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಂದೇ ಸೂರಿನಡಿ ಗಾಂಧೀಜಿ ಜೀವನ ದರ್ಶನ

ಧಾರವಾಡ : ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಗಾಂಧಿ ವಿಚಾರಧಾರೆಗಳನ್ನು ನಿರಂತರವಾಗಿ ಸಮಾಜಕ್ಕೆ ತಲುಪಿಸಲು ಅನುವಾಗುವಂತೆ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಿಸಲು ನಿರ್ಧರಿಸಿ, ಕನಸು ಕಂಡಿದ್ದಾರೆ. ಅದರಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧಿ ಭವನ ನಿರ್ಮಿಸುವ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿಗಳ ಕನಸನ್ನು ನನಸು ಮಾಡಿದೆ. ಧಾರವಾಡ ಗಾಂಧಿ ಭವನದ ಉದ್ಘಾಟನೆಯನ್ನು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಬರುವ ಸೋಮವಾರ ಏಪ್ರಿಲ್ 21 ರಂದು ನೆರವೇರಿಸಲಿದ್ದಾರೆ.

ಸನ್ಮಾನ್ಯ ಮುಖ್ಯ ಮಂತ್ರಿಗಳು 2016-17 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಹಾತ್ಮಾ ಗಾಂಧಿಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ರೂ. 3 ಕೋಟಿಗಳ ವೆಚ್ಚದಲ್ಲಿ ಗಾಂಧಿಭವನ ನಿರ್ಮಿಸಲಾಗುವುದೆಂದು ಘೋಷಿಸಿದ್ದರು.

ಈ ಕುರಿತು ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಿ ಸದರಿ ಉದ್ದೇಶಕ್ಕಾಗಿ ಅಗತ್ಯ ಸರ್ಕಾರಿ ನಿವೇಶನ ಒದಗಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಸರ್ಕಾರದ ಸೂಚನೆಯಾನುಸಾರ ಧಾರವಾಡ ತಾಲೂಕಿನ ಗುಲಗಂಜಿಕೊಪ್ಪದ ಸರ್ವೆ ನಂಬರ್ 80 ರಲ್ಲಿನ 29 ಗುಂಟೆ ನಿವೇಶನವನ್ನು ದಿ. 17-07-2018 ರಂದು ಮಂಜೂರು ಮಾಡಿ, ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

ಸರ್ಕಾರದ ಸೂಚನೆಯಂತೆ ಕರ್ನಾಟಕ ರೂರಲ್ ಇನ್‍ಫ್ರಾಸ್ಟ್ರಕ್ಟರ್ ಡೆವಲಪ್‍ಮೆಂಟ್ ಲಿ. ಧಾರವಾಡ ಇವರಿಗೆ ಕಾಮಗಾರಿ ವಹಿಸಲಾಗಿದ್ದು, ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಿ ಶೀಘ್ರದಲ್ಲೇ ಉದ್ಘಾಟನೆಗೆ ಸಿದ್ಧಗೊಳಿಸಲು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯ ಪ್ರಭು ಅವರು ಸಂಬಂಧಿಸಿದ ಏಜೆನ್ಸಿಗೆ ಸೂಚನೆ ನೀಡಿದ್ದರು.
“ಗಾಂಧಿ ಭವನ” ನಿರ್ಮಾಣಕ್ಕೆ ಅಗತ್ಯವಾದ ರೂಪುರೇಷೆ ಹಾಗೂ ವಿನ್ಯಾಸವನ್ನು ನಿರ್ಧರಿಸಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯ ಸಲಹೆಯಂತೆ ಕ್ರಮಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ್ದರು.

ದೇಶೀಯ ಶೈಲಿಯಲ್ಲಿ ಸ್ಥಳೀಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಗಾಂಧಿ ಕುಟೀರಗಳ ಮಾದರಿಯಲ್ಲಿ “ಗಾಂಧಿ ಭವನ” ನಿರ್ಮಿಸಲಾಗಿದೆ. ಗಾಂಧಿ ಭವನಕ್ಕೆ ಮುಖ್ಯವಾಗಿ ಎರಡು ವಿಭಾಗಗಳನ್ನು ಹೊಂದಲಾಗಿದೆ. ಮುಖ್ಯ ಕಟ್ಟಡದಲ್ಲಿ ವಿವಿಧೋದ್ದೇಶ ಸಭಾಂಗಣ, ಗ್ರಂಥಾಲಯ, ಮತ್ತೊಂದು ವಿಭಾಗದಲ್ಲಿ ಕಚೇರಿ, ತರಬೇತಿ ಕೇಂದ್ರವಿದೆ. ಈ ಮೂಲಕ “ಗಾಂಧಿ ಭವನ” ಗಳಲ್ಲಿ ಕಾರ್ಯಚಟುವಟಿಕೆಗಳನ್ನು, ತರಬೇತಿಗಳನ್ನು ವಿವಿಧ ವಿಭಾಗಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಗಾಂಧಿ ಭವನಗಳು ವರ್ಷಪೂರ್ತಿ ಚಟುವಟಿಕೆಯಿಂದ ಕೂಡಿರಲು ಆಯಾ ಜಿಲ್ಲೆಯ ವಿಶ್ವವಿದ್ಯಾಲಯಗಳನ್ನು ಹಾಗೂ ಎನ್.ಎಸ್.ಎಸ್., ಗಾಂಧಿ ವಿಚಾರಧಾರೆ ಪ್ರಚಾರಕ ಸಂಘಟನೆಗಳ ಸಹಯೋಗ ಪಡೆದುಕೊಳ್ಳಲಾಗುತ್ತದೆ.

ಗಾಂಧಿವಾದದಲ್ಲಿ ಮತ್ತು ಗಾಂಧೀಜಿ ಪ್ರಣೀತ ಕಾರ್ಯಚಟುವಟಿಕೆಗಳಲ್ಲಿ ನಂಬಿಕೆಯುಳ್ಳ ಹಾಗೂ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹಾಗೂ ವಿವಿಧ ಕಾರ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ವ್ಯಕ್ತಿಗಳು, ಸಂಘಟನೆಗಳ ಸಹಯೋಗ ಪಡೆಯಲಾಗುತ್ತದೆ. ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸಲು ಅನುವಾಗುವಂತಹ ಕಾರ್ಯಚಟುವಟಿಕೆಗಳನ್ನು ರೂಪಿಸಿ, ನಿಯಮಿತವಾಗಿ ಜಿಲ್ಲಾಧಿಕಾರಿಗಳ ನೇತೃತ್ವದ ಕಾರ್ಯ ಅನುಷ್ಠಾನ ಸಮಿತಿಯಿಂದ ಗಾಂಧಿ ಭವನ ನಿರ್ವಹಿಸಲಾಗುತ್ತದೆ.

ಧಾರವಾಡ ಗಾಂಧಿ ಭವನ:
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚರಿತ್ರೆಯನ್ನು ಒಂದೇ ಸೂರಿನಡಿ ತಿಳಿಸಲು ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣದ ಕನಸಾಗಿತ್ತು.

ಗಾಂಧಿ ಭವನದ ನಿರ್ಮಾಣದ ಮೂಲ ಉದ್ದೇಶ ಗಾಂಧೀಜಿ ಜೀವನದ ದರ್ಶನ ಹಾಗೂ ಅವರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದಾಗಿದೆ.

ಗಾಂಧೀಜಿಯವರ ತತ್ವ, ಆದರ್ಶ, ಜೀವನ ಕುರಿತ ಮಾಹಿತಿ ಒಳಗೊಂಡ ಗ್ರಂಥಾಲಯವನ್ನು ಈ ಭವನದಲ್ಲಿ ಅಳವಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಆವರಣದಲ್ಲಿ ಗಾಂಧೀಜಿ ಪ್ರತಿಮೆ, ದಂಡಿ ಯಾತ್ರೆ ಮತ್ತು ಗಾಂಧೀಜಿಯವರು ಮಕ್ಕಳೊಂದಿಗೆ ಇರುವ ಪ್ರತಿಮೆಗಳನ್ನು ನಿರ್ಮಿಸಿರುವುದು ವಿಶೇಷ.

ಧಾರವಾಡ ನಗರದ ಹೊಸ ಬಸ್ ನಿಲ್ದಾಣ ಹತ್ತಿರ (ಗುಲಗಂಜಿಕೊಪ್ಪ ಗ್ರಾಮದ) ಸರ್ವೆ ನಂಬರ: 80 ರಲ್ಲಿ 29 ಗುಂಟೆ 8 ಆಣೆ ನಿವೇಶನವನ್ನು ಗಾಂಧಿ ಭವನ ನಿರ್ಮಾಣಕ್ಕಾಗಿ ಮೂರು ಕೋಟಿ ರೂಗಳ ಮಂಜೂರಾತಿ ನೀಡಲಾಗಿತ್ತು. ಅದರಂತೆ ಸದರಿ ಕಟ್ಟಡದಲ್ಲಿ ಗ್ರಂಥಾಲಯ, ಸಭಾಭವನ, ಸಿಬ್ಬಂದಿಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಮ್ಯೂಜಿಯಂ, ಗ್ಯಾಲರಿ ಮುಂತಾದವುಗಳನ್ನು ಹೊಂದಲಾಗಿದೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ