ಬಳ್ಳಾರಿ / ಕಂಪ್ಲಿ : ನಂ.10 ಮುದ್ದಾಪುರ ಗ್ರಾಪಂಯ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಮುಖ್ಯರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗಾಗಿ ಸಾರಿಗೆ ಬಸ್ ನಿಲ್ಲಿಸುವಂತೆ ಹಾಗೂ ಬಸ್ ತಂಗುದಾಣ ನಿರ್ಮಿಸುವಂತೆ ಆಗ್ರಹಿಸಿ, ಭೀಮ್ ಆರ್ಮಿ ತಾಲೂಕು ಘಟಕದಿಂದ ಕಂಪ್ಲಿ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಹಾಗೂ ನಂ. 10 ಮುದ್ದಾಪುರ ಗ್ರಾಮ ಪಂಚಾಯತಯ ಬಿಲ್ ಕಲೆಕ್ಟರ್ ವೀರಭದ್ರಗೌಡ ರವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲೂಕು ಅಧ್ಯಕ್ಷ ಎ.ಎಸ್.ಯಲ್ಲಪ್ಪ ಮಾತನಾಡಿ, ಕಂಪ್ಲಿಯಿಂದ ಸುಮಾರು 3-4 ಕಿ.ಮೀಟರ್ ದೂರದಲ್ಲಿ ಡಿಪ್ಲೋಮಾ, ಹಾಸ್ಟೇಲ್ ಇದ್ದು, ಇಲ್ಲಿಗೆ ಬರಲು ದೂರವಾಗುವುದರಿಂದ ಸಾರಿಗೆ ಬಸ್ ನಿಲ್ಲಿಸುವುದಿಲ್ಲ. ದಿನನಿತ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಮುದ್ದಪುರ ಗ್ರಾ.ಪಂಯ ಯಲ್ಲಮ್ಮ ಕ್ಯಾಂಪ್‌ನನಿಂದ ಕಂಪ್ಲಿಗೆ ಬರಲು ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡದೇ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾಗಿದೆ. ಇಲ್ಲಿನ ಮುಖ್ಯರಸ್ತೆಯಲ್ಲಿ ಸಾಕಷ್ಟು ಸಾರಿಗೆ ಬಸ್‌ಗಳ ಓಡಾಟ ಇದ್ದರೂ, ನಿಲ್ಲಿಸುತ್ತಿಲ್ಲ ಹಾಗೂ ವಿದ್ಯಾರ್ಥಿಗಳು, ವಯಸ್ಸಾದವರು, ಸಾರ್ವಜನಿಕರು ಬಸ್ ಗಾಗಿ ನಿಲ್ಲಲು ಸರಿಯಾದ ತಂಗುದಾಣ ಇಲ್ಲ ಆದ್ದರಿಂದ ಈ ಕೂಡಲೇ ಅಧಿಕಾರಿಗಳು ಎಚ್ಚರವಹಿಸಿ, ಬಸ್ ನಿಲುಗಡೆಗೆ ಸೂಚಿಸಬೇಕು ಹಾಗೂ ಬಸ್ ತಂಗುದಾಣ ನಿರ್ಮಿಸಿ ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
