
ಯಾದಗಿರಿ: ಇಂದು ಗುರುಮಠಕಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸರಕಾರದ
ಬೆಲೆ ಏರಿಕೆಯ ವಿರೋಧಿಸಿ ಜನಾಕ್ರೋಶಯಾತ್ರೆಯ ಕುರಿತಾದ ಕಾರ್ಯಕಮದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಜನಾಕ್ರೋಶ ಯಾತ್ರೆಯು ಕಾಂಗ್ರೆಸ್ ಸರಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ಯಾದಗಿರಿ ನಗರದ ತಹಶೀಲ್ದಾರ ಕಚೇರಿಯಿಂದ ಸುಭಾಷ್ ವೃತ್ತದವರೆಗೆ ಜರುಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ಯಾದಗಿರಿ ನಗರ ಸಭೆ ಅಧ್ಯಕ್ಷರು ಆದ ಕು: ಲಲಿತಾ ಅನಪುರ್ ತಿಳಿಸಿದರು, ಜನಾಕ್ರೋಶ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು, ಸರಕಾರಕ್ಕೆ ಜನರು ಬೆಲೆ ಏರಿಕೆಯಿಂದ ಒಂದರ ಮೇಲೆ ಒಂದು ಗಾಯದ ಮೇಲೆ ಬರೆ ಎಳೆದಂತೆ ಜನ ತತ್ತರಿಸಿ ರೋಸಿ ಹೋಗಿದ್ದಾರೆ ಸರಕಾರಕ್ಕೆ ಬಿಸಿ ಮುಟ್ಟಿಸುವ ಯಾತ್ರೆ ನಮ್ಮದಾಗಲಿ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದರು.
ಈ ಸಭೆಯಲ್ಲಿ ಯಾದಗಿರಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಬಸವರಾಜ್ ವಿಭೂತಿಹಳ್ಳಿ, ಬಿಜೆಪಿ ಗುರುಮಠಕಲ್ ಮಂಡಲ ಅಧ್ಯಕ್ಷರು ನರಸಿಂಹಲು ನೀರೇಟಿ, ಪಕ್ಷದ ಹಿರಿಯ ಮುಖಂಡರು, ಯುವ ಮುಖಂಡರು, ಎಲ್ಲಾ ಮೋರ್ಚಾದ ಪದಾಧಿಕಾರಿಗಳು
ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
