ಉತ್ತರ ಪತ್ರಿಕೆಯಲ್ಲಿ ₹ 500 ಇಟ್ಟು, ನನ್ನ ಲವ್ ನಿಮ್ಮ ಕೈಯಲ್ಲಿದೆ ಸರ್, ಪಾಸು ಮಾಡಿ ಅಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆ!
ಬೆಳಗಾವಿ / ಚಿಕ್ಕೋಡಿ : ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗಿನಿಂದಲೇ ತಯಾರಿ ನಡೆಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ.
ಎಲ್ಲಾ ವಿಷಯಗಳ ಪಾಠವನ್ನು ಈಗಿನಿಂದಲೇ ಅಧ್ಯಯನ ಮಾಡಿ. ಹೀಗೆ ಅಧ್ಯಯನ ಮಾಡುವುದರಿಂದ ಮುಂದೆ ವಾರ್ಷಿಕ ಪರೀಕ್ಷೆಗೆ ಅನುಕೂಲವಾಗಲಿದೆ. ಅಂದಿನ ದಿನದ ಪಾಠವನ್ನು ಅಂದೇ ಓದುವುದನ್ನು ಇಂದಿನಿಂದಲೇ ಆರಂಭ ಮಾಡಿ. ಇದು ವಿದ್ಯಾರ್ಥಿಗಳಿಗೆ ಆ ಪಾಠವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಗ್ರಹಿಸಿಕೊಳ್ಳಲು ಅನುಕೂಲವಾಗುತ್ತದೆ. ಎಂದೆಲ್ಲಾ ಎಲ್ಲಾ ಶಿಕ್ಷಕರು ಹಾಗೂ ಪಾಲಕರು ಎಷ್ಟೇ ತಿಳಿ ಹೇಳಿದರು, ವಿದ್ಯಾರ್ಥಿಗಳು ಇಂದಿನ ಮೊಬೈಲ್ ಇನ್ನಿತರೆ ದುಚ್ಚಟಗಳಿಗೆ ಬಲಿಯಾಗಿ ವಿದ್ಯಾಭ್ಯಾಸವನ್ನು ಮಾಡದೆ ಪರೀಕ್ಷೆಯಲ್ಲಿ ನಾನಾ ರೀತಿಯ ಪರಿಪಾಡಲು ಪಡುತ್ತಾರೆ ಅದಕ್ಕೆ ಇದೊಂದು ತಾಜಾ ಉದಾಹರಣೆ !
ಇದು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಗತಿ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜರುಗುವಾಗ ಇಂಥ ಘಟನೆಗಳು ಬೆಳಕಿಗೆ ಬರುತ್ತವೆ. ವಿಷಯ ಏನು ಅಂತ ನಿಮಗೆ ಕಾಣಿಸುತ್ತಿದೆ. ಹತ್ತನೇ ತರಗತಿ ಪರೀಕ್ಷೆ (SSLC exams) ಬರೆದಿರುವ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ₹ 500 ರ ನೋಟೊಂದನ್ನು ಇಟ್ಟು
“ಸರ್ ರೀ ಮೇಡಂ ರೀ ನಿಮ್ಮ ಕಾಲ ಬೀಳತ್ತೀನೆ.. ನನ್ನ Love ನಿಮ್ಮ ಕೈಯಾಗ ಆಯಿತಿ ರೀ, ನಾ ಪೇಪರ್ ದಾಗ ಪಾಸ್ ಆದರ ಅಷ್ಟ Love ಮಾಡತ್ತೆನೆ ಅಂದಾಳ ರೀ ನನ್ನ ಹುಡುಗಿ ಈ 500 ನಿವ ಚಾ ಕುಡಿರಿ ಸರ ರೀ ನನ ಪಾಸ ಮಾಡರಿ ಅಂತ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದು ಅಂಗಲಾಚಿದ್ದಾನೆ. ಸದ್ಯ ಈ ಬರವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ತನ್ನನ್ನು ಪಾಸ್ ಮಾಡುವಂತೆ ಕೋರಿದ್ದಾನೆ. ಈ ಉತ್ತರ ಪತ್ರಿಕೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ. ಅವನು ಪಾಸಾದರೆ ಮಾತ್ರ ಹುಡುಗಿ ಲವ್ ಮಾಡುತ್ತಾಳಂತೆ ಮತ್ತು ಅಪ್ಪ ಅಮ್ಮ ಕಾಲೇಜಿಗೆ ಕಳಿಸುತ್ತಾರಂತೆ!
ನಮ್ಮ ಕರುನಾಡ ಕಂದ ಪತ್ರಿಕೆಯಿಂದ ಕಳಕಳಿಯ ಮನವಿ 🙏
ಎಲ್ಲಾ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ದಯವಿಟ್ಟು ವಿದ್ಯಾರ್ಥಿಗಳೇ, ಶಿಕ್ಷಕರು ಹೇಳಿದ ಹಾಗೆ ಶ್ರಮವಹಿಸಿ ಓದಿಕೊಳ್ಳಿ. ಪಾಲಕರೆ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವುದನ್ನು ದಯವಿಟ್ಟು ಗಮನಿಸಿ.
ವರದಿ : ಜಿಲಾನಸಾಬ್ ಬಡಿಗೇರ್.
