ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ತಾರಾಪೂರ ಗ್ರಾಮದ ಶ್ರೀ ಗುರು ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಜಂಗಮ ವಟುಗಳಿಗೆ ಧರ್ಮಾರ್ಥ ಅಯ್ಯಾಚಾರ ಮತ್ತು ಲಿಂಗ ದೀಕ್ಷೆಯನ್ನು ತಾರಾಪೂರ ಹಿರೇಮಠದ ಪರಮ ಪೂಜ್ಯರಾದ ಶ್ರೀ ಷ. ಬ್ರ. ಗುರುಲಿಂಗ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ತಾರಾಪೂರ ಇವರ ಅಮೃತ ಹಸ್ತದಿಂದ ನೆರವೇರಿತು. ಈ ಭಕ್ತಿಯ ಸೇವೆಯನ್ನು ಶ್ರೀ ಮಲ್ಲಿಕಾರ್ಜುನ್ ಜೋಗೂರ ಹಾಗೂ ಇವರ ಪರಿವಾರ ನಡೆಸಿಕೊಟ್ಟರು.
ವರದಿ : ಹಣಮಂತ ಚ. ಕಟಬರ್
