ಶಿರಸಿ/ಯಲ್ಲಾಪುರ: ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗವಾದ ಶ್ರೀ ಶಾರದಾಂಬಾ ದೇವಸ್ಥಾನ ಯಲ್ಲಾಪುರದಲ್ಲಿ 20-04-2025ರಂದು ವಾರ್ಷಿಕ ದೇವಕಾರ್ಯ ನೆರವೇರಿತು.
ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು. ವೈದಿಕ ಕಾರ್ಯಕ್ರಮಗಳು ಆರಂಭಗೊಂಡು ನವಚಂಡಿ ಹವನದ ಪೂರ್ಣಾಹುತಿ, ಕಲಾವೃದ್ಧಿ ಹವನ, ಶ್ರೀಗಳಿಂದ ಶ್ರೀ ದೇವರಿಗೆ ವಿಶೇಷ ಪೂಜೆ ಕುಂಭಾಭಿಷೇಕಗಳು ನೆರವೇರಿದವು. ಭಕ್ತರಿಂದ ಶ್ರೀಗಳವರ ಭಿಕ್ಷಾ ಸೇವೆ, ಪಾದಪೂಜೆಯೂ ನಡೆಯಿತು.
ಇದೇ ಸಂದರ್ಭದಲ್ಲಿ ಶಾರದಾಂಬಾ ಶಿಕ್ಷಣ ಸಂಸ್ಥೆಯವರು ನಡೆಸುತ್ತಿರುವ ವಟುಗಳ ವಸಂತ ವೇದ, ಸಂಸ್ಕೃತ, ಯೋಗ ಶಿಬಿರದ ಮಕ್ಕಳಿಗೆ ವಿಶೇಷ ಆಶೀರ್ವಚನವನ್ನು ನೀಡಿದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
