ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ:
ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಾನ್ಯ ಎನ್ ಮುತ್ತಪ್ಪ ರೈ ರವರ ಕಿರಿಯ ಪುತ್ರ ರಿಕ್ಕಿ ರೈ ರವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಲು ಮನವಿ ಸಲ್ಲಿಸಲಾಯಿತು.
ಜಯ ಕರ್ನಾಟಕ ಸಂಘಟನೆಯು ಕನ್ನಡ ನಾಡಿನ ನಾಡು, ನುಡಿ ,ನೆಲ, ಜಲ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಳು ಮತ್ತು ಜನಪರ ಹೋರಾಟಗಳನ್ನು ಮಾಡುತ್ತಾ ರಾಜ್ಯದಲ್ಲಿ ಸಕ್ರಿಯವಾದ ಸಂಘಟನೆಯಾಗಿದೆ. ಇಂತಹ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಾನ್ಯ ಎನ್ ಮುತ್ತಪ್ಪ ರೈ ರವರ ಸುಪುತ್ರ ರಿಕ್ಕಿ ರೈ ರವರ ಮೇಲೆ ಶೂಟ್ ಔಟ್ ಮಾಡಿ ಕೊಲೆ ಯತ್ನ ಮಾಡಿರುವುದು ಖಂಡನೀಯ ಹಾಗಾಗಿ ದಯಮಾಡಿ ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರದ ವತಿಯಿಂದ ರಿಕ್ಕಿ ರೈ ಅವರಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಒಂದು ವೇಳೆ ಮಾಡದೆ ಹೋದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ತರ ಬಯಸುತ್ತಿದ್ದೇವೆ ಎಂದು ಶ್ರೀರಾಮ್ ನಗರ ಕೋಗಳಿ ತಾಂಡಾ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಸಿ ಮಂಜುನಾಥ್, ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ದೇವರ ಮನಿ ನಿಂಗಪ್ಪ, ಸಂಘಟನಾ ಕಾರ್ಯದರ್ಶಿ ಆರ್ ಕೃಷ್ಣ ನಾಯ್ಕ, ಆರ್ ಪಂಪಾಪತಿ ನಾಯ್ಕ್ , ಕೆ ಶಿವಕುಮಾರ್, ಸದಸ್ಯರಾದ ಭೋವಿ ಫಕೀರಸ್ವಾಮಿ ಶ್ರವಣ್ ಕುಮಾರ್ , ಸುಬ್ರಹ್ಮಣ್ಯ ನಾಯ್ಕ್ ಹಾಗೂ ಇತರರು ಇದ್ದರು.
- ಕರುನಾಡ ಕಂದ
