ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೌಕರರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ

ಯಾದಗಿರಿ : ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ

ಬೆಂಗಳೂರು ಸಪ್ತಗಿರಿ ಆಸ್ಪತ್ರೆ ವೈದ್ಯರಿಂದ ತಪಾಸಣೆ

ಗುರುಮಠಕಲ್‌: ಅನೇಕ ರೋಗಗಳಿಂದ ಬಳಲುವ ಸಾಮಾನ್ಯ ಮತ್ತು ಬಡವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ರೋಗಗಳ ಉಚಿತ ತಪಾಸಣೆಯನ್ನು ಬೆಂಗಳೂರು ಸಪ್ತಗಿರಿ ಆಸ್ಪತ್ರೆಯಿಂದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಗುರುಮಠಕಲ್ ತಾಲೂಕಾ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ್ ಬಿರಾದಾರ
ಅವರು ಉದ್ಘಾಟಿಸಿದರು.

ಪಟ್ಟಣದಲ್ಲಿ ಸಮುದಾಯ ಆರೋಗ್ಯ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯಿಂದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಗುರುಮಠಕಲ್ ತಾಲೂಕಾ ಘಟಕದ ಸಹಯೋಗದಲ್ಲಿ ಆಯೋಜಿಸಿದ ಏರ್ಪಡಿಸಿದ್ದ ನುರಿತ ತಜ್ಞರಿಂದ ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಹಾಗೂ ಮೂಳೆ-ಕೀಲು ತಪಾಸಣಾ ಶಿಬಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿ ಅವರು
ದುಬಾರಿ ವೆಚ್ಚದಲ್ಲಿ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ಪಡೆಯದೆ ರೋಗಿಗಳ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ತೊಂದರೆ ನೀಗಿಸಲು ಬೆಂಗಳೂರಿನ ವೈದ್ಯರ ತಂಡ ಗುರುಮಠಕಲ್ ನಲ್ಲಿ ಆಗಮಿಸಿದೆ. ಉತ್ತಮ ಆರೋಗ್ಯಕ್ಕಾಗಿ ತಜ್ಞ ಸರಕಾರಿ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಿರಿ. ಅನಾರೋಗ್ಯಕ್ಕೆ ತುತ್ತಾದ ಜನರಿಗೆ ಸರಿಯಾದ ಮಾರ್ಗದರ್ಶನ ವಿಲ್ಲದೇ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂದಿನ ದಿನಗಳಲ್ಲಿ ಮನೆ ಮಂದಿ ಇಲ್ಲಾ ದುಡಿದರೂ ಸಾಲದ ಕಾಲವಿದೆ. ಅಂತಹದ್ದರಲ್ಲಿ ಬಡ ಜನರಿಗೆ ಆರೋಗ್ಯ ಸಮಸ್ಯೆ ಆದರೇ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ಶಿಬಿರಗಳ ಉಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಸಂತೋಷ ನೀರೆಟಿ ಮಾತನಾಡಿ, ಆರೋಗ್ಯದ ಕುರಿತು ಹೆಚ್ಚು ಜಾಗೃತಿಯಿಲ್ಲ. ಗುರುಮಠಕಲ್ ಗಡಿ ಭಾಗದ ಬಡ ಜನರು ಇರುವುದರಿಂದ ಉಚಿತ ಶಿಬಿರಗಳನ್ನು ಆರೋಗ್ಯ ತಪಾಸಣೆವನ್ನು ನಮ್ಮ ಜೀವನವನ್ನು ನಾವು ಶರೀರಕ್ಕೆ ನಾವೆ ಕಾಪಾಡಿಬೇಕು ಅನೇಕ ರೋಗಗಳಿಂದ ಬಡವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಹಲವು ರೋಗಗಳ ಉಚಿತ ತಪಾಸಣೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಗುರುಮಠಕಲ್ ತಾಲೂಕಾ ಘಟಕದ ಸಹಯೋಗದಲ್ಲಿ ಆಯೋಜಿಸಿದ ಆರೋಗ್ಯ ತಪಾಸಣೆ ಶಿಬಿರ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಈಗಾಗಲೇ ಬೃಹತ್ ಆರೋಗ್ಯ ಶಿಬಿರದಲ್ಲಿ ಸುಮಾರು 480 ಫಲಾನುಭವಿಗಳು ಪಾಲ್ಗೊಂಡಿದ್ದು, 23 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರುಗೆ ಕರೆದುಕೊಂಡು ಹೋಗುವರು ಎಂದು ತಿಳಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಮೈತ್ರಿ ಮಾತನಾಡಿ, ಈ ಭಾಗದ ಜನರಿಗೆ ಶಿಬಿರ ಉಪಯುಕ್ತವಾಗಿದೆ. ಆಸ್ಪತ್ರೆಯಲ್ಲಿ ಶಿಬಿರ ಹಮ್ಮಿಕೊಂಡಿದ್ದಕ್ಕೆ ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಗುರುಮಠಕಲ್ ತಾಲೂಕಾ ಘಟಕದ ಅಧ್ಯಕ್ಷ ಸಂತೋಷ ನಿರೇಟಿ ಅವರು ಸಂಘದ ಆಯೋಜಕರು ಮತ್ತು ಆಸ್ಪತ್ರೆ ಅವರಿಗೆ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಪುರಸಭೆ ಉಪಾಧ್ಯಕ್ಷ ರೇಣುಕಾ ಪಡಿಗೆ, ತಾಲ್ಲೂಕು ವೈದ್ಯ ಅಧಿಕಾರಿ ಡಾ.ಹಣಮಂತ ರೆಡ್ಡಿ, ಡಾ.ಚಂದ್ರಶೇಖರ, ಡಾ.ಸುರೇಂದ್ರ ಶೆಟ್ಟಿ, ಡಾ.ವಿನಯ್, ಡಾ.ಪವನ, ಡಾ.ಶ್ರವಣ ರೆಡ್ಡಿ, ಡಾ.ಸತೀಶ್ ರೆಡ್ಡಿ, ತಾಲ್ಲೂಕು ಪಂಚಾಯತ ಸಹಾಯಕ ಯೋಜನೆ ಅಧಿಕಾರಿ ಭಾರತಿ ಸಜ್ಜನ, ರಾಜ್ಯ ಪರಿಷತ್ ಸದಸ್ಯ ಹರೀಶಕುಮಾರ, ನಾರಾಯಣ ರೆಡ್ಡಿ ಪೋಲಿಸ್ ಪಾಟೀಲ್, ಬಸವರಾಜ, ಶಶಿಕಾಂತ ಜನರ್ಧನ, ಶರಣಪ್ಪ ಧರ್ಮಪುರ ಮಾಣಿಕ್ಯಪ್ಪ, ಶ್ರೀನಿವಾಸ ಮಡಿವಾಳ, ಸಿದ್ದಲಿಂಗಪ್ಪ, ಪ್ರಶಾಂತ ಭೀಮಯ್ಯ, ಆರೋಗ್ಯ ಮಿತ್ರ ಕಾರ್ತಿಕ ಗೌಡ, ವೆಂಕಟೇಶ್, ಭೀಮಾಶಂಕರ, ಸರಕಾರಿ ನೌಕರರು ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ