ಯಾದಗಿರಿ: ಶಹಾಪುರ ನಗರದಲ್ಲಿ ದಿನಾಂಕ 23-04-2025 ಬುಧವಾರದಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಯಾದಗಿರಿ ನಗರದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯ ಕುರಿತು ಇಂದು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ಅಮೀನರಡ್ಡಿ ಯಾಳಗಿ ಅವರ ಗೃಹ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಲಾಯಿತು.
ಸುದ್ಧಿ ಗೋಷ್ಠಿ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷರು ಈ ಪ್ರತಿಭಟನೆಯಲ್ಲಿ ನಮ್ಮ ರಾಜ್ಯಾಧ್ಯಕ್ಷರು ಮತ್ತು ರಾಜ್ಯದ ನಾಯಕರು ಪಾಲ್ಗೊಳ್ಳುತ್ತಿದ್ದು ಜಿಲ್ಲೆಯ ಎಲ್ಲಾ ನಾಯಕರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪ್ರತಿಭಟನೆಯನ್ನು ಯಶಸ್ಚಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಅಮೀನರಡ್ಡಿ ಯಾಳಗಿ, ಹಿರಿಯ ಮುಖಂಡರಾದ ಡಾ|| ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷರಾದ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಕಾರ್ಯದರ್ಶಿಯಾದ ದಾಮು ಪವಾರ, ಮುಖಂಡರಾದ ಬಸವರಾಜ ಆರುಣಿ, ತಿರುಪತಿ ಸೇರಿ, ವಿನೋದ ಗೋಗಿ, ಇತರ ಪ್ರಮುಖರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
- ಕರುನಾಡ ಕಂದ
