ಚಾಮರಾಜನಗರ/ ಹನೂರು : 24 ನೇ ತಾರೀಖು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಯಾಬಿನೆಟ್ ಮೀಟಿಂಗ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಜೆಡಿಎಸ್ ಕಚೇರಿ ಮುಂಭಾಗ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ಶಾಸಕ ಎಂ.ಆರ್. ಮಂಜುನಾಥ್ ರವರ ಸಮ್ಮುಖದಲ್ಲಿ ನಡೆಯಿತು
ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ತಾವು ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದ ಮೂಲಭೂತ ಸೌಕರ್ಯವನ್ನು ಒದಗಿಸುತ್ತೇನೆ ಎಂದು ನೀವು ಮಾತು ಕೊಟ್ಟಿದ್ದೀರಿ ಅದರಂತೆ ತಮ್ಮನ್ನ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ ಕ್ಷೇತ್ರದಲ್ಲಿ ರಸ್ತೆ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಜೆಡಿಎಸ್ ಕಾರ್ಯಕರ್ತರು ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ರವರಿಗೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ರವರು ಈಗಾಗಲೇ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸರ್ಕಾರದಿಂದ 200 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಇದರಲ್ಲಿ ಸರ್ಕಾರದಿಂದ 108 ಕೋಟಿ ರೂ. ಬಿಡುಗಡೆಯಾಗಿದೆ
ರಸ್ತೆ ಕುಡಿಯುವ ನೀರು ಹಾಗೂ ಮೂಲಭೂತ ಸೌಕಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಆಶೀರ್ವಾದದಿಂದ ಶ್ರೀ ಮಲೆ ಮಾದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿರುವುದರಿಂದ ಕ್ಷೇತ್ರದ ರಸ್ತೆ ಕುಡಿಯುವ ನೀರು ಹನೂರು ಪಟ್ಟಣದಲ್ಲಿ ಪ್ರಜಾಸೌಧ, ಕೋರ್ಟು ತಾಲೂಕು ಪಂಚಾಯಿತಿ, ಹೊಗೇನಕಲ್ ಫಾಲ್ಸ್, ಗಗನಚುಕ್ಕಿ ಬರಚುಕ್ಕಿ, ಗುಂಡಲ್ ಜಲಾಶಯ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಮನಗುಡ್ಡೆ ಹಾಗೂ ಹುಬ್ಬೆ ಹುಣಸೆ ಡ್ಯಾಂಗೆ ಸರ್ಕಾರದಿಂದ ಹೆಚ್ಚಿನ ಅನುದಾನಕ್ಕಾಗಿ ಕ್ಷೇತ್ರದ ಅನೇಕ ರಸ್ತೆಗಳು ಹಾಳಾಗಿರುವುದು ಹಾಗೂ ಇನ್ನೂ ಅನೇಕ ಸಮಸ್ಯೆಗಳನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತ್ತಿರ ಮನವಿ ಮಾಡಿಕೊಳ್ಳುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ 100 ಬೆಡ್ಡಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೇಲ್ದರ್ಜೆಗೆ ಹಾಗೂ ಕೆ ಎಸ್ ಆರ್ ಟಿ ಸಿ ಹೊಸ ಡಿಪೋ ಭೂಮಿ ಪೂಜೆ ನೆರವೇರಿಸುವರು.
ಮುಂದಿನ ತಿಂಗಳು ಬಂಡಳ್ಳಿ ಮಣಗಳ್ಳಿ ಹಾಗೂ ಪಾಳ್ಯ ರಸ್ತೆಯನ್ನು ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಮಲೆ ಮಾದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ 24 ನೇ ತಾರೀಕು ನಡೆಯುವ ಹಿನ್ನೆಲೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಮುಖಂಡರು ಬನ್ನಿ.
25ನೇ ತಾರೀಕು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಯಾಬಿನೆಟ್ ಮೀಟಿಂಗ್ ಮುಗಿಸಿ ಹನೂರು ಪಟ್ಟಣಕ್ಕೆ ಆಗಮಿಸುವ ಹಿನ್ನಲೆಯಲ್ಲಿ ನಾನು ಹಾಗೂ ನಮ್ಮ ಕಾರ್ಯಕರ್ತರು ಭವ್ಯ ಸ್ವಾಗತವನ್ನು ಕೋರಲು ಹನೂರು ಪಟ್ಟಣದ ಅನ್ನಪೂರ್ಣೇಶ್ವರಿ ಹೋಟೆಲ್ ಹತ್ತಿರ ತಾವೆಲ್ಲರೂ ಬನ್ನಿ, ನನ್ನ ಎರಡು ವರ್ಷದ ಅವಧಿಯಲ್ಲಿ ನನ್ನಿಂದ ನನ್ನ ಕಾರ್ಯಕರ್ತ ಬಂಧುಗಳಿಗೆ ನೋವುಂಟಾಗಿದ್ದಾರೆ ಕ್ಷಮೆ ಕೋರುತ್ತೇನೆ, ನಾನು ಚುನಾವಣೆಯಲ್ಲಿ ಕೊಟ್ಟಂತಹ ಮಾತನ್ನ ಈಗಲು ಬದ್ಧನಾಗಿದ್ದೇನೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷರಾದ ಆನಂದ ಚಾಮುಲ್ ನಿರ್ದೇಶಕ ಉದ್ನೂರು ಪ್ರಸಾದ್, ಎರಂಬಾಡಿ ಹುಚ್ಚಯ್ಯ, ಗದ್ದನ್ ಪಾಳ್ಯ ಮಣಿ, ಬಂಡಳ್ಳಿ ಜೆ ಸಿಮ್ ತಮ್ಮಯ್ಯ, ಮಣಗಳ್ಳಿ ತಮ್ಮೇಗೌಡ, ಶಿವಪ್ಪ ಬಸಪ್ಪನ ದೊಡ್ಡಿ, ಶಿವಮೂರ್ತಿ ಮಂಗಲ ಶಿವರಾಂ ಸಿಂಗನಲ್ಲೂರು ರಾಜಣ್ಣ ಹಾಗೂ ಇನ್ನಿತರ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್
