
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಜಮನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 5 ಲಕ್ಷ ಅನುದಾನದಲ್ಲಿ ಶಾಲಾ ಮೇಲ್ಚಾವಣಿ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ
ಗಾಳಿಯ ರಭಸಕ್ಕೆ ಮೇಲ್ಚಾವಣಿ ಸಂಪೂರ್ಣ ಹಾರಿ
ಶಾಲೆ ಮುಂದುಗಡೆ ಬಿದ್ದಿರುವ ಘಟನೆ ಕಂಡು ಬಂದಿದೆ ಗಜಮನಾಳ ಗ್ರಾಮದ ಗ್ರಾಮಸ್ಥರು ಕೆಲಸ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ.
ವರದಿ : ಭೀಮಸೇನ ಕಮ್ಮಾರ
