ಬಳ್ಳಾರಿ / ಸಿರುಗುಪ್ಪ : ಸಿರುಗುಪ್ಪ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದು ಹಾಕಿದ್ದಾರೆ.
ಸ್ಥಳ ಪರಿಶೀಲನಾ ವರದಿಯೊಂದನ್ನು ನೀಡಲು ಲಂಚಕ್ಕೆ ಬೇಡಿಕೆ 3.50 ಲಕ್ಷ ಲಂಚ ಕೇಳುತ್ತಿರುವುದಾಗಿ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡ ವಿಶ್ವನಾಥ್ ಸಾಮಾಜಿಕ ಕಾರ್ಯಕರ್ತ ಮಹಾಂತೇಶ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಬಳ್ಳಾರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಮಹಾಂತೇಶ್ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಿದ್ದ ಲೋಕಾಯುಕ್ತ ಪೊಲೀಸರು ಮಂಗಳವಾರ ತಹಶೀಲ್ದಾರ್ ನಿವಾಸದಲ್ಲೇ ದಾಳಿ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಹೊರ ವಲಯದಲ್ಲಿರುವ ತಹಶೀಲ್ದಾರ್ ನಿವಾಸದಲ್ಲಿ 1.75 ಲಕ್ಷ ಲಂಚ ಪಡೆಯುವಾಗಲೇ ವಿಶ್ವನಾಥ್ ಅವರನ್ನು ಬಂಧಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್.
