ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಪುಸ್ತಕಾವಲೋಕನ” “ಹತ್ತು ಹೆಜ್ಜೆ,ಹಲವು ಗೆಜ್ಜೆ ” (ಕಾವ್ಯ ಗುಚ್ಛ)

ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).
ಪ್ರಕಟಿತ ವರ್ಷ : ೨೦೨೫.
ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.
ಬೆಲೆ. ೧೨೦ ರೂಪಾಯಿಗಳು.
ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ.

“ಗಮನ ಸೆಳೆವ ಕವನ ಸಂಕಲನ -ಹತ್ತು ಹೆಜ್ಜೆ,ಹಲವು ಗೆಜ್ಜೆ”

ಕನ್ನಡ ಸಾರಸ್ವತ ಲೋಕದಲ್ಲಿ ಈಗಾಗಲೇ ತಮ್ಮ ಕವನ, ಹನಿಗವನ, ಗಜಲ್, ಮತ್ತು ಬಿಡಿ ಬರಹಗಳ ಮೂಲಕ ಗುರುತಿಸಿಕೊಂಡಿರುವ ಹೂವಿನ ಹಡಗಲಿಯ ಮಹಿಳಾ ಸಂವೇದನೆಯ ಕವಿಯತ್ರಿ, ಶ್ರೀಮತಿ ಶೋಭಾ ಪ್ರಕಾಶ್ ಮಲ್ಕಿಒಡೆಯರ್, ಅವರ ಸಂಪಾದಕತ್ವದಲ್ಲಿ ಹೊರಹೊಮ್ಮಿದ , ಹತ್ತು ಹೆಜ್ಜೆ ಹಲವು ಗೆಜ್ಜೆ,ಎನ್ನುವ ಈ ಕವನ ಸಂಕಲನದಲ್ಲಿ ಒಟ್ಟು ೭೨ ಕವನಗಳಲ್ಲಿ ೯ ಗಜಲ್ ಕವಿತೆಗಳೂ ಸೇರಿದ್ದು,ಇದೊಂದು ಗಮನಾರ್ಹ ಕವನ ಸಂಕಲನವಾಗಿದೆ.
ಶ್ರೀಮತಿ ಶೋಭಾ ಪ್ರಕಾಶ್ ಮಲ್ಕಿಒಡೆಯರ್, ಸಾಹಿತ್ಯ ಪ್ರಿಯರಿಗೆ, ಪರಿಚಿತರು. ವ್ಯಕ್ತಿ ತಾನೊಬ್ಬನೇ ಬೆಳೆದರೆ ಸಾಲದು,ತನ್ನೊಂದಿರುವ ಇತರರೂ ಬೆಳೆಯಬೇಕು ಎಂಬ ಮನೋಭಾವ ಉಳ್ಳವರು, ಈ ಹಿನ್ನೆಲೆಯಲ್ಲಿ ಸಮಾನ ಆಸಕ್ತ ಕವಿ/ಕವಿಯತ್ರಿಯರ ಕವನ, ಗಜಲ್ ಗಳನ್ನು, ಪುಸ್ತಕ ರೂಪದಲ್ಲಿ, ಪ್ರಕಟಿಸಿರುವ ಈ ಸುಂದರ ಪುಸ್ತಕವೇ “ಹತ್ತು ಹೆಜ್ಜೆ, ಹಲವು ಗೆಜ್ಜೆ”

ಈ ಸಂಕಲನದಲ್ಲಿ ಒಟ್ಟು ಹತ್ತು ಜನ,ಕವಿ, ಕವಿಯತ್ರಿ ಯರಿದ್ದಾರೆ, ಅವರ ಹಲವು ಕವಿತೆಗಳಿವೆ,ಅಂತೆಯೆ ಈ ಪುಸ್ತಕಕ್ಕೆ ಈ ಹೆಸರು ಸೂಕ್ತವಾಗಿದೆ.

“ಹತ್ತು ಹೆಜ್ಜೆ ಹಲವು ಗೆಜ್ಜೆ,”ಕವನ ಸಂಕಲನದ ಮೂಲಕ , ಸಾಹಿತ್ಯ ಪ್ರಪಂಚಕ್ಕೆ ಕಾಲಿಡುತ್ತಿರುವ ಹಿರಿಯ ಕವಿಗಳೂ ಇಲ್ಲಿರುವುದು ವಿಶೇಷ.
ಆರಂಭದಲ್ಲಿ ಹಿರಿಯ ಕವಿ ಮತ್ತು ನಿವೃತ್ತ ಶಿಕ್ಷಕರಾದ ಶ್ರೀ ವೀರಬಸಯ್ಯ, ಸಂಗಯ್ಯ ಕಾಡಗಿಮಠ ಅವರು ಪರಿಚಯ ವಿದ್ದು, ಮೂಲತಃ ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಇವರು,ರಂಗಾಸಕ್ತರೂ,ಕಲಾವಿದರೂ ಹೌದು. ಪ್ರಸ್ತುತ ಅವರ ಕವನಗಳನ್ನು ನೋಡೋದಾದರೆ… ಆರಂಭದ ಕವನ ‘ಗವಿಮಠದ ಗುರೂಜಿ’ ಕವನದಲ್ಲಿ , ಕೊಪ್ಪಳದ ಗವಿಮಠದ ಪೀಠಾಧಿಪತಿಗಳಲ್ಲಿ ಹನ್ನೊಂದನೇ ಪೀಠಾಧಿಪತಿಗಳಾಗಿ, ಅಸಂಖ್ಯ ಭಕ್ತರ ಕಣ್ಮಣಿಯಾಗಿ ಅನೇಕ ಪವಾಡಗಳನ್ನು ಮಾಡಿ ಪವಾಡ ಪುರುಷರಾಗಿ ಖ್ಯಾತಿ ಪಡೆದ ಸ್ವಾಮೀಜಿಗಳ ವ್ಯಕ್ತಿ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ,ಅದೇ ರೀತಿಯಲ್ಲಿ ರಚನೆಯಾದ ಮತ್ತೊಂದು ಕವನ ‘ಗುಡದೂರ ಗುರುದೇವ,’ ಈ ಕವನವೂ ಕೂಡಾ ದೊಡ್ಡ ಬಸವಾರ್ಯ ತಾತನವರ ಮಹಿಮೆ,ಪವಾಡಗಳ ಕುರಿತು
ಹೇಳುವಲ್ಲಿ ಯಶಸ್ವಿಯಾಗಿದೆ.
ಅವರ ಮರೀಚಿಕೆ, ಕವನದ ಕೆಲವು ಸಾಲುಗಳನ್ನು ಗಮನಿಸೋಣ,.
“ತೃಷೆ ತೀರಿಸಲು ಸುತ್ತ ಮುತ್ತ ನೋಡಿದೆ, ಮೈಯೆಲ್ಲಾ ಕಣ್ಣಾಗಿ
ಕಾಡೆಲ್ಲಾ ಕಣ್ಣಾಡಿಸಿದೆ, ಅನತಿ ದೂರದಲ್ಲಿ ಕಂಡೆ, ಸುಂದರ ಪ್ರಕೃತಿ, ಅನುಭವಕ್ಕೆ ಸಿಕ್ಕಿತು,
ಸ್ವಚ್ಛಂದ ಸರೋವರ..”
ಸರಳವಾದ ಪದಗಳಿಂದ ಕವನ ಓದಿಸಿಕೊಂಡು ಹೋಗುತ್ತದೆ.
ಮುಂದುವರಿದು ಯಾರೇ ನೀನು ಚೆಲುವೆ,ಎಂಬ ಕವನದಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ, ಇವರ ಗಜಲ್ ಗಳಲ್ಲಿ ಗ್ರಾಮ್ಯ ಭಾಷೆಯ ಸೊಗಡು, ಮತ್ತು ಶಿಷ್ಟ ಪದಗಳು ಬಳಕೆಯಾಗಿವೆ.
ಬಾಲ ಕಾರ್ಮಿಕ ಎಂಬ ಕವನದಲ್ಲಿ ಗುಲಾಮಗಿರಿಯನ್ನು ಖಂಡಿಸುತ್ತಾ , ದೇಶದ ಅಭಿವೃದ್ಧಿಗೆ ಕಾನೂನು ತೊಡಕುಗಳು ನೆಪಗಳಾಗಬರದೆಂಬ ಆಶಯ, ಕವಿಗಳದ್ದಾಗಿದೆ.
ಇನ್ನುಳಿದಂತೆ , ದಾಂಪತ್ಯ ಜೀವನ, ನೇಗಿಲ ಯೋಗಿ, ಕವನಗಳೂ ಸಹ ಕಾವ್ಯ ಗುಣ ಹೊಂದಿರುವ ಕಾರಣಕ್ಕೆ ಗಮನ ಸೆಳೆಯುತ್ತವೆ.
ಶ್ರೀಮತಿ ಯು.ರೇಣುಕಾ ಸಂತೋಷ್ ಅವರ ಕವನಗಳೂ ಇಲ್ಲಿ ಸಂಗ್ರಹವಾಗಿವೆ. ವೃತ್ತಿಯಿಂದ ಪ್ರೌಢಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಕವಿಯತ್ರಿ ಯಾಗಿ, ಸಾಹಿತ್ಯ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು, ಕೆಲವು ಕವನ ಸಂಕಲನ ಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ ಇವರ ಕವನಗಳನ್ನು ಅವಲೋಕನ ಮಾಡಿದಾಗ, ಇವರ ಕಾವ್ಯ ಬರಹದ ಶೈಲಿ , ಆಕರ್ಷಿಸುತ್ತದೆ. ಉದಾಹರಣೆಗೆ, ಯುಗಾದಿ, ಬಂಧನ, ಹಬ್ಬ, ಕವಿತೆಗಳನ್ನು ಹೆಸರಿಸಬಹುದು.ಅವರ ‘ಹಸಿರೇ ಉಸಿರು,’ ಎಂಬ ಕವನದಲ್ಲಿ
“ಹಸಿರೇ ಉಸಿರು ಜೀವನಕ್ಕೆ
ಹಸಿರೇ ಮೂಲ ಜೀವ ಸಂಕುಲಕ್ಕೆ,
ಬಿಸಿಲ ಝಳ ಶಮನ ಮಾಡಿ
ಆಮ್ಲಜನಕ ಬಿಡುಗಡೆ ಮಾಡಿ

ಶುದ್ಧ ಗಾಳಿಗೆ ಕಾರಣವಾಗಿ
ಅಂತರ್ಜಲದ ಮೂಲ ಬೇರಾಗಿ

ಆಹಾರ, ಬಟ್ಟೆ ವಸತಿ ನೀರು
ಗಾಳಿ ಮೂಲ ಹಸಿರು,
ಜಗದ ಜೀವನ ಸಂಕುಲದ ಹೆಸರು.” ಈ ಕವನದಲ್ಲಿ ಕವಿಯತ್ರಿಯು ಪರಿಸರ ಪ್ರೇಮವನ್ನು ಕಾಣಬಹುದು.
ಭಾವೈಕ್ಯತೆ, ಮೋಸದಂತಹ ಕವನಗಳಲ್ಲಿ ಸಮಾಜದಲ್ಲಿನ ಜನರಲ್ಲಿ ನಾವೆಲ್ಲಾ ಒಂದೆನ್ನುವ ಭಾವನೆ ಬೆಳೆಯಬೇಕು,ಎಂದು ಹೇಳುವುದರ ಜೊತೆಗೆ ,ಅಕ್ರಮ ಮಾರ್ಗಗಳಿಂದ, ಅನೇಕ ದುಶ್ಚಟಗಳ ದಾಸರಾಗಿ, ಬದುಕನ್ನು ಹಾಳು ಮಾಡುವ ಮೋಸಗಾರರೂ ಇಲ್ಲಿದ್ದಾರೆ, ಅವರ ಬಗ್ಗೆ ನಾವು ಜಾಗೃತರಾಗಬೇಕು ಎಂದೂ ಹೇಳುತ್ತಾರೆ.

ಕವನ ಸಂಕಲನದಲ್ಲಿನ ಮತ್ತೊಬ್ಬ, ಗಮನಾರ್ಹ ಕವಿ, ಕೊಟ್ರೇಶ ಜವಳಿ, ಮೂಲತಃ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ ಗ್ರಾಮದ ಉದಯೋನ್ಮುಖ ಕವಿ. ಈ ಕವಿ ಓದಿದ್ದು ಬಹಳ ಕಡಿಮೆ, ಆದರೆ ಇವರ ಸಾಹಿತ್ಯದ ಅಭಿರುಚಿ ಅಪಾರ ಎಂದೇ ಹೇಳಬಹುದು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಪ್ ನಲ್ಲಿ ಹಾಯ್ಕು, ಚುಟುಕು ,ಟಂಕಾ, ಶಾಯಿರಿ, ರುಬಾಯಿ, ಕವನ ,ಮತ್ತು ಆಧುನಿಕ ವಚನಗಳನ್ನು ಬರೆಯುವ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರಾಗಿದ್ದಾರೆ. ಅವರ ಕಾವ್ಯ ಶೈಲಿಯನ್ನು ಅವಲೋಕಿಸೋಣ,
‘ ನಾಡಗೀತೆ’ ಎಂಬ ಕವನದಲ್ಲಿ ಜವಳಿಯವರು ಹೀಗೆ ಹೇಳುತ್ತಾರೆ,
” ನಾಡು ದೇವಿಯ ಗುಡಿಯ ಒಳಗಡೆ ಬೆಳಗುತಿಹುದು ದೀಪವು, ಓಡಿ ಹೋಯಿತು ನಾಡು ಜನರ ಅಂಧಕಾರವು,
ಅಂದ ಚಂದದ ಚಂದನದ ನಾಡಿದು….

ಭಾರತ ಮಾತೆಯ ತನುಜೆ ಇವಳು, ಭುವನೇಶ್ವರಿ ಎಂಬ
ನಾಮ ಪಡೆದಳು, ಕಲ್ಲು ಕಲ್ಲಿನಲ್ಲೂ ಸಂಗೀತದ ಅಲೆಯು, ಭೂಗರ್ಭದಲಿ
ಹೊನ್ನ ಎದುರಿನ ಬಲೆಯು…
ಈ ಕವನದಲ್ಲಿ ನಾಡು ದೇವಿಯ ಸ್ಮರಣೆ ಅಷ್ಟೇ ಅಲ್ಲ, ಕನ್ನಡ ನಾಡಿನ ಸೌಂದರ್ಯ, ಭಾಷೆಯ ಮೇಲಿನ ಅಭಿಮಾನ,

ಎಲ್ಲವೂ ಅಭಿವ್ಯಕ್ತವಾಗಿದೆ, ಇವರ ಇನ್ನೊಂದು ಕವನ, ಬೆಳಕಿನೆಡೆಗೆ, ಅಜ್ಞಾನವೆಂಬ ಕತ್ತಲೆಯನ್ನು ಓಡಿಸಲು
ಭರವಸೆಯ ದೀಪ ಹಚ್ಚುವ, ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನದ ಕತ್ತಲೆಯನು ನಿವಾರಿಸುವಂತೆ ಆಗಲಿ, ಎನ್ನುತ್ತಾರೆ. ಇದೇ ನೆಲೆಯಲ್ಲಿ ರಚನೆಯಾದ ಇನ್ನಿತರ ಕವನಗಳನ್ನು ಹೆಸರಿಸಬಹುದಾದರೆ, ಅಮರ ಸ್ನೇಹ, ನಿಧಾನಿಸು, ದೈವ ದರ್ಶನ, ಇರಲಿ ಹೆಂಗ ಎಂಬ ಕವನಗಳೂ ಗಮನ ಸೆಳೆಯುತ್ತವೆ.
ಹತ್ತು ಹೆಜ್ಜೆ,ಹಲವು ಗೆಜ್ಜೆ ಕವನ ಸಂಕಲನದ ಮತ್ತೊಬ್ಬ ಕವಿ, ಶ್ರೀ ಚೆನ್ನೃವೀರ ಸ್ವಾಮಿಯವರು, ಮೂಲತಃ ಹೂವಿನ ಹಡಗಲಿಯವರೇ ಆಗಿದ್ದು ,
ಕೇವಲ ಹತ್ತನೇ ತರಗತಿಯವರೆಗೆ ಮಾತ್ರ, ವಿದ್ಯಾಭ್ಯಾಸ ಮಾಡಿ ನಂತರ
ಕೃಷಿ ಯಲ್ಲಿ ತೊಡಗಿಸಿಕೊಂಡು, ಸಾಹಿತ್ಯದ ಒಲವನ್ನು ಬೆಳೆಸಿಕೊಂಡು,ಕವನ,ಸಾಹಿತ್ತಿಕ
ಸಂಘಟನೆಯ ಮೂಲಕ ಕ್ರಿಯಾಶೀಲರಾಗಿದ್ದಾರೆ.
ಅವರ ಕವನಗಳ ಅವಲೋಕನ ಮಾಡಿದರೆ,ಅವರ ಕಾವ್ಯಶೈಲಿ,
ಗೊತ್ತಾಗುತ್ತದೆ ಅವರು ತಮ್ಮ ಭಕ್ತಿ ಸುಧೆ ಎನ್ನುವ ಕವನದಲ್ಲಿ,
ವಿಘ್ನ ನಿವಾರಕ ವಿಘ್ನೇಶ್ವರ ನನ್ನು ಭಕ್ತಿ ಭಾವದಿಂದ ಸ್ತುತಿಸಿದ್ದಾರೆ. ಒಲವಿನ ಗೆಳತಿ, ದೂರ ಬೇಡ, ಕವನಗಳಲ್ಲಿ, ಪ್ರೀತಿ, ಪ್ರೇಮದ ಭಾವನೆಗಳು ಚೆನ್ನಾಗಿ ಮೂಡಿ ಬಂದಿವೆ.ಉದಾಹರಣೆಗೆ
“ಹೇ ಚೆಂದುಳ್ಳಿ ಚೆಲುವೆ
ನಾ ನಿನಗಾಗಿ ಕಾದಿರುವೆ,
ಈ ಮಸ್ತಕದ ನಡುವೆ
ತುಟಿ ಬಿಚ್ಚಿ ಮುತ್ತನೊಂದು ಕೊಡುವೆ”…ಎನ್ನುತ್ತಲೇ
ತಾರೆಗಳಂತೆ ಬಾಳೋಣ,
ಸೂರ್ಯ ಚಂದ್ರರಂತೆ ದಣಿವಾರಿಸೋಣ,” ಎಂದು
ದಾಂಪತ್ಯದ ಸವಿಯುಣಿಸಿದ
ಹೆಂಡತಿಯನ್ನು ಹೊಗಳಿದ್ದಾರೆ,
ಇನ್ನುಳಿದಂತೆ ಮಾನವ, ಜ್ಯೋತಿ ಬೆಳಗಿಸು,ನಿರಾಳನಾಗಿರು, ಕವನಗಳೂ ಗಮನ ಸೆಳೆಯುತ್ತವೆ.
ಈ ಕವನ ಸಂಕಲನದ ಮತ್ತೋರ್ವ ಕವಿ ಕವಿಯತ್ರಿ, ಶ್ರೀಮತಿ ರಿಹಾನ್ ರಫೀಕ್ ಕಲಾರಿ,ಯವರು ವೃತ್ತಿಯಿಂದ ಶಿಕ್ಷಕಿಯಾಗಿದ್ದು , ಸಾಹಿತ್ಯ ದಲ್ಲಿ
ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ,ಕೃಷಿ ಮಾಡುತ್ತಿರುವರು,ಅವರ ಕವನಗಳ ಕುರಿತು ತಿಳಿಯೋಣ ಬನ್ನಿ, ಹೆಣ್ಣು, ಎಂಬ ಕವನದಲ್ಲಿ, ಹೆಣ್ಣನ್ನು ಕೀಳಾಗಿ ನೋಡಬೇಡಿ,ಅವಳಿಗೂ ಬದುಕುವ ಹಕ್ಕು ಇದೆ, ಎಂದು ಹೇಳುವ ಮೂಲಕ, ಸಮಾಜದಲ್ಲಿ ಹೆಣ್ಣಿಗೆ ಗೌರವ, ಸ್ಥಾನಮಾನ ಗಳು ಸಿಗಬೇಕೆಂದು ಬಯಸುತ್ತಾರೆ,
ಇವರ ಇತರ ಕವನಗಳು, ಹೂವಿನ ಹಡಗಲಿ, ಮುನಿಸು,
ಕನ್ನಡ ನಾಡು, ಪತ್ರಿಕೆ,ಕಲ್ಲು, ಕೂಡಾ ಗಮನ ಸೆಳೆಯುತ್ತವೆ.
ಈ ಸಂಕಲನದ ಮತ್ತೋರ್ವ, ಹಿರಿಯ ಕವಿ, ಶಿಕ್ಷಕ, ಶ್ರೀ ವೀರಭದ್ರಯ್ಯ,ಟಿ.ಎಂ.
ಉತ್ತಂಗಿ ಅವರು ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಜನಿಸಿ, ಸ್ವಗ್ರಾಮದಲ್ಲಿಯೇ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ , ಕನ್ನಡ ಸಾಹಿತ್ಯದ ಸೇವೆಯನ್ನೂ ಮಾಡುತ್ತಿರುವ ಇವರ ಕವನಗಳು ರಾಜ್ಯದ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಪ್ರಸ್ತುತ ಕವನ ಸಂಕಲನ, ಹತ್ತು ಹೆಜ್ಜೆ ಹಲವು ಗೆಜ್ಜೆ,ಯಲ್ಲಿಯೂ ಪ್ರಕಟವಾಗಿವೆ.
‘ ಋಣಾನುಬಂಧ’ ಎಂಬ ಇವರ ಕವನ,ಮದುವೆ,ಸತಿ ಪತಿಯರ ಸಂಬಂಧ,ವಿರಸ, ತಾಳ್ಮೆ,ಯಂತಹ ವಿಷಯಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಆ ಕವನದ ಕೆಲವು ಸಾಲುಗಳು ಹೀಗಿವೆ.

ಕೌಟುಂಬಿಕ ಘನತೆಗೆ ಬದ್ಧರಾಗಿ
ಹೆತ್ತವರ ಒಟ್ಟಿಗೆ ಖುಷಿಯಿಂದ ಸಾಗಿ, ಸಂಸಾರ
ಶರಧಿಯಲ್ಲಿ ಬಾಳಿ, ತಲೆಬಾಗಿ
ಸಾಧನೆಯಲ್ಲಿ ಆಚೆ ದಡ ಸೇರಿ ಬೀಗಿ.’ ಜೀವನದಲ್ಲಿ ಗಂಡು ಹೆಂಡತಿ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ಇವರ ಇತರ ಕವನಗಳನ್ನು ಹೆಸರಿಸುವುದಾದರೆ,
ಬೇವು – ಬೆಲ್ಲ,ನೀಚ ಬುದ್ಧಿಯ ಬೀಡು, ಶ್ರೇಷ್ಠ ಸಾಧಕರು, ಅರಿವು, ಧರೆಯ ಹಸಿರಾಗಿಸು, ಎಂಬ ಕವನಗಳೂ ಚೆನ್ನಾಗಿ ಮೂಡಿ ಬಂದಿವೆ.
ಈ ಕವನ ಸಂಕಲನದಲ್ಲಿ ಸೇರ್ಪಡೆಯಾದ ಇನ್ನೋರ್ವ ಕವಿ, ಮಹೇಶ್ ಕುಮಾರ್ ಕೆ.ಎಂ ಅವರು ಬಿ.ಕಾಂ. ಪದವೀಧರರು, ಸಾಹಿತ್ಯದಲ್ಲಿ ಆಸಕ್ತರು, ವೃತ್ತಿಯಿಂದ ವ್ಯಾಪಾರಿಗಳಾದರೂ, ಪ್ರವೃತ್ತಿಯಿಂದ ಕಾವ್ಯ ಬರೆಯುವ ಹವ್ಯಾಸ ಹೊಂದಿದ ಇವರ ಕವನಗಳು, ಸಪ್ತಪದಿ, ಗುಡಿಯ ಬಿಟ್ಟ ಭಗವಂತ,ಎಲ್ಲಿಗೆ ಬಂದು ನಿಂತಿವೆ,ಜನುಮ, ನನ್ನ ಹುಡುಗಿ, ಗುಪ್ತ ಗಾಮಿನಿ, ಕವನಗಳು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಕವನ ಸಂಕಲನದ ಕವಿಯತ್ರಿಯರಲ್ಲಿ ಶ್ರೀಮತಿ ಕಮಲಾ ನಿಂಗಪ್ಪ,ಮಣೇಗಾರ ಅವರೂ ಒಬ್ಬರು. ಇವರು ಹುಟ್ಟಿದ್ದು ಹಾವೇರಿಯಲ್ಲಿ ಆದರೂ ಸಧ್ಯ ಅವರು ಹೂವಿನ ಹಡಗಲಿ ನಿವಾಸಿಗಳು. ಇವರು ಗೃಹಿಣಿಯಾಗಿದ್ದು, ಸಾಹಿತ್ಯಾಸಕ್ತರಾಗಿ ಹಲವಾರು ಕವನಗಳನ್ನು ಬರೆದಿರುವರು,ಅವರ ಕವನಗಳಲ್ಲಿ , ನನ್ನವ್ವ, ಕವನದಲ್ಲಿ, ತಾಯಿಯ ಪ್ರೀತಿ,
ಸ್ವರ್ಗಕ್ಕೆ ಸಮವಂತೆ, ತಾಯಿ ನಮಗೆ ಅದೃಷ್ಟವಂತೆ, ಹೊತ್ತು
ಹೆತ್ತು ತುತ್ತಿಟ್ಟಾಕೆ, ಎಂದು ಮಮತಾಮಯಿ ತಾಯಿಯನ್ನು ಕುರಿತು ಬರೆದಿದ್ದಾರೆ. ಇವರ ಇನ್ನುಳಿದ ಕವನಗಳು ಹೀಗಿವೆ,
ಕನಕದಾಸ,ಮಳೆ, ಅನ್ನದಾತ, ಯೋಗ, ದಾಂಪತ್ಯ ,ಕವನಗಳೂ ಕಾವ್ಯ ಸತ್ವ ದಿಂದ ಗಮನ ಸೆಳೆಯುತ್ತವೆ.

ಶ್ರೀ ಸಂತೋಷ ಕುಮಾರ ಅವರು ಎಂ.ಎ ಬಿ.ಎಡ್, ಪದವೀಧರರು. ಇವರ ಕವನಗಳಲ್ಲಿ, ಬದುಕುವುದು ಹೇಗೆ? ಕವನವು, ಎಲ್ಲಾ ಆಸೆ,ಕನಸುಗಳು ನುಚ್ಚು ನೂರಾದಾಗ , ಬದುಕುವುದು ಹೇಗೆ,ಎಂದು ವಾಸ್ತವದ ಚಿತ್ರಣ
ನೀಡುತ್ತದೆ. ಇದೇ ನೆಲೆಯಲ್ಲಿ ಕಾರ್ಮೋಡ, ಹುಡುಕಾಟ, ನೆನಪು, ಜೀವನಾಡಿ,ಕವನಗಳು
ಓದುಗರನ್ನು ಓದಿಸಿಕೊಂಡು ಹೋಗುತ್ತವೆ.
“ಹತ್ತು ಹೆಜ್ಜೆ ಹಲವು ಗೆಜ್ಜೆ ” ಸಂಪಾದಕರಾದ ಶ್ರೀಮತಿ ಶೋಭಾ ಪ್ರಕಾಶ್ ಮಲ್ಕಿ ಒಡೆಯರ್,ಅವರೇ ಕೇಂದ್ರ ಬಿಂದು ಎನ್ನಬಹುದು ಇವರ ಕವಿತೆಗಳು, ರಾಜ್ಯ ಮಟ್ಟದ ಪತ್ರಿಕೆಗಳಾದ ತುಷಾರ, ಕರ್ಮವೀರ, ಮಯೂರ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ , ಸಾಹಿತ್ಯ ಪ್ರಪಂಚಕ್ಕೆ ಚಿರಪರಿಚಿತರಾಗಿದ್ದಾರೆ, ಈ ಸಂಕಲನದಲ್ಲಿ ಇವರ ಏಳು ಗಜಲ್ ಗಳು ಪ್ರಕಟವಾಗಿರುವುದು ವಿಶೇಷವಾಗಿದೆ, ಗಜಲ್ 1ರಲ್ಲಿ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಸಿದ್ಧಗಂಗಾ ಮಠದ ಶ್ರೀ ಗಳ ಮಹಿಮೆ ಇದೆ.
2,3,4ನೆಯ ಗಜಲ್ ಗಳಲ್ಲಿ, ಪ್ರೇಮಿಗಳ ಪ್ರಣಯ ಭಾವನೆಗಳು,ಸುಂದರ ಜೀವನದ ಮಧುರ ಕ್ಷಣಗಳು, ಸಾಮರಸ್ಯದ ಬದುಕು, ಅಭಿವ್ಯಕ್ತ ವಾಗಿವೆ.

ಒಟ್ಟಾರೆಯಾಗಿ ಹತ್ತು ಕವಿಗಳ, ಹಲವು ಕವನಗಳು, ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸುವ ಭರವಸೆಯ ಕವನ ಸಂಕಲನವಾಗಲಿ ಎಂಬ ಸದಾಶಯ ದೊಂದಿಗೆ ನನ್ನ ಪುಸ್ತಕ ಅವಲೋಕನ ಬರಹಕ್ಕೆ ವಿರಾಮ ನೀಡುವೆ.

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು,
    ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
    ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ