ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಳಗಿ : ಶ್ರೀ ನೀಲಕಂಠ ಕಾಳೇಶ್ವರ ಸಂಭ್ರಮದ ರಥೋತ್ಸವ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವವು ಭಕ್ತಾದಿಗಳಿಂದ ಜೈ, ಘೋಷಣೆಗಳ ಕೂಗುತ್ತಾ, ಸಂಭ್ರಮದಿಂದ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಭಕ್ತರ ಮನಸ್ಸಿನಲ್ಲಿ ಸದಾ ನೆನೆಸಿರುವ ಮತ್ತು ಬೇಡಿದ ವರವನ್ನು ಕೊಡುವ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವ ನಿಮಿತ್ಯವಾಗಿ ಬೆಳಿಗ್ಗೆ ಶ್ರೀ ನೀಲಕಂಠ ಕಾಳೇಶ್ವರ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಮಂಗಳಾರತಿ ಅರ್ಚಕರಿಂದ ಮಾಡಲಾಯಿತು ವಿಶೇಷವಾಗಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರೆಯ ನಿಮಿತ್ಯವಾಗಿ ಬೆಳಿಗ್ಗೆ 6 ಗಂಟೆಗೆ ಅಗ್ಗಿಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ತಮ್ಮ ಹರಕೆಯನ್ನು ಅಗ್ಗಿ ತುಳಿದು ತಿಳಿಸಿದರು.
ಕಾಳಗಿ ಪಟ್ಟಣ ಪ್ರಮುಖ ಮನೆತನಗಳಾದ ಜೈ ಶಂಕರ್ ಮಾಲಿಪಾಟೀಲ್, ಶರಣ್ ಗೌಡ ಪೊಲೀಸ್ ಪಾಟೀಲ್, ಶಿವಕುಮಾರ್ ಪಂಚಾಳ, ಪ್ರಭಾಕರ್ ಮಕಪ್ ನೊರ, ಗುರುಲಿಂಗಯ್ಯ ಮಠಪತಿ ಇವರ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿ ಕೋಲುಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಕಾಳಗಿಯ ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಭರತನೂರಿನ ಶ್ರೀ ಚಿಕ್ಕ ಗುರು ನಂಜೇಶ್ವರ ಸ್ವಾಮೀಜಿ, ಶರಣಬಸವೇಶ್ವರ ಸಂಸ್ಥಾನ 9ನೇ ಪೀಠಾಧಿಪತಿಗಳಾದ ಪೂಜ್ಯ. ಚಿ.ದೊಡ್ಡಪ್ಪ ಅಪ್ಪ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜಕಿ ಜೈ, ಹರ ಹರ ಮಹಾದೇವ್, ಜೈ ಶ್ರೀ ರಾಮ್, ವಿವಿಧ ರೀತಿಯಲ್ಲಿ ಜೈ ಘೋಷಗಳು ಭಕ್ತರಿಂದ ಮೊಳಗಿದವು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು. ಈ ಸಂದರ್ಭದಲ್ಲಿ ಪುರವಂತರ ಕುಣಿತ,ಹಲಿಗೆ, ಡೊಳ್ಳು, ಪಟಾಕಿಗಳ ಸಿಡಿತ, ವಿವಿಧ ರೀತಿಯ ವಾದ್ಯಗಳೊಂದಿಗೆ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ರಥೋತ್ಸವ ಕಾರ್ಯಕ್ರಮದಲ್ಲಿ ಡೊಣ್ಣುರಿನ ಶ್ರೀ ವೀರಭದ್ರಪ್ಪ ಅಜ್ಜ, ಶ್ರೀ ಚಂದ್ರ ಮೌಳಿ ಮಹಾರಾಜ್, ಜಗದೇವ ಗುತ್ತೆದಾರ್ ವಿಧಾನ ಪರಿಷತ್ ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ್, ರಾಜೇಶ್ ಗುತ್ತೇದಾರ್, ಶರಣಗೌಡ ಪೊಲೀಸ್ ಪಾಟೀಲ್, ರವಿದಾಸ ಪತಂಗೆ, ರಾಜಕುಮಾರ ರಾಜಪುರ್, ರಾಘವೇಂದ್ರ ಗುತ್ತೇದಾರ್, ವಿಶ್ವನಾಥ್ ವನಮಾಲಿ, ಜೈ ಶಂಕರ್ ಮಾಲಿ ಪಾಟೀಲ್, ನೀಲಕಂಠ ಗುತ್ತೇದಾರ್, ಪ್ರಶಾಂತ್ ಕದಂ, ಬಸವರಾಜ್ ಸಿಂಗ್ ಶೆಟ್ಟಿ, ಸಂತೋಷ್ ಕುಡ್ದಳ್ಳಿ, ಶಿವ ಶರಣಪ್ಪ ಮಾಕಪನೋರ, ಹಣಮಂತ ಕಾಂತಿ, ಶಿವಕುಮಾರ್ ಪಡಶೆಟ್ಟಿ, ಸಂತೋಷ್ ಪತಂಗೆ, ರೇವಣಸಿದ್ಧ ಕುಡ್ದಳ್ಳಿ, ಶಿವಶರಣಪ್ಪ ಗುತ್ತೇದಾರ್, ಸುರೇಶ್ ಕೋರೆ, ವಿವೇಕ್ ಗುತ್ತೇದಾರ್, ಬಾಬು ನಾಟಿಕರ್, ಮುಂತಾದ ಪ್ರಮುಖ ನಾಯಕರು, ಸುತ್ತಮುತ್ತಲ ಗ್ರಾಮದ ಜನರು, ಮಹಿಳೆಯರು, ಯುವಕರು, ಪುಟಾಣಿ ಮಕ್ಕಳು, ಇತರರು ಇದ್ದರು.
ಡಿ ವೈ ಎಸ್ ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವ್ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ,ಮತ್ತು ಸಿಬ್ಬಂದಿ ವರ್ಗದವರು ಬಂದೋಬಸ್ತ್ ವ್ಯವಸ್ಥೆ ಮಾಡಿದರು.

ವರದಿ : ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ