
ಬಳ್ಳಾರಿ/ ಕಂಪ್ಲಿ : 12ನೇ ಶತಮಾನದಲ್ಲಿಯೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರರು ಜಗತ್ತು ಕಂಡ ಅಪ್ರತಿಮ ಹೋರಾಟಗಾರ, ಸಮಾಜ ಸುಧಾರಕ, ಧಾರ್ಮಿಕ ಗುರು ಹಾಗೂ ಕ್ರಾಂತಿಕಾರ ಎಂದು ತಹಶೀಲ್ದಾರ್ ಶಿವರಾಜ ಶಿವಪುರ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವೀರಶೈವ ಲಿಂಗಾಯತ ಸಮಾಜದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಾದಿ ಶರಣರು ಸಮಾಜದ ಅಭಿವೃದ್ಧಿಗೆ ನೀಡಿದ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ. ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ, ಜೀವನ ಸುಂದರವಾಗಿರಲಿದೆ ಎಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮಾತನಾಡಿ, ಬಸವಣ್ಣನವರು ನೀಡಿದ ಪ್ರತಿಯೊಂದು ಆಚಾರ, ವಿಚಾರ, ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಷಣ್ಮುಖಪ್ಪ, ಮುಖಂಡರಾದ ಅರವಿ ಬಸವನಗೌಡ, ಎಸ್.ಎಂ.ನಾಗರಾಜಸ್ವಾಮಿ, ಜಿ.ಚಂದ್ರಶೇಖರಗೌಡ, ವಾಲಿ ಕೊಟ್ರಪ್ಪ, ಎಸ್.ಚಂದ್ರಶೇಖರಗೌಡ, ರೇಣುಕಾಗೌಡ, ಬಿ.ವಿ.ಗೌಡ, ಕಲ್ಗುಡಿ ವಿಶ್ವನಾಥ, ಕೆ.ವಿರೂಪಾಕ್ಷಪ್ಪ, ಸುರೇಶಗೌಡ, ಬಸವರಾಜ, ವೀರಭದ್ರಯ್ಯಸ್ವಾಮಿ, ಎಸ್.ಡಿ.ಬಸವರಾಜ, ಎಲೆಗಾರ ವೆಂಕಟರೆಡ್ಡಿ, ಟಿ.ಶರಣಪ್ಪ, ಸಚಿನ್, ಅರವಿ ಅಮರೇಶಗೌಡ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಜಡೆಯ್ಯಸ್ವಾಮಿ ಸೇರಿದಂತೆ ವೀರಶೈವ ಸಮಾಜದವರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
