ಬೀದರ್/ ಚಿಟಗುಪ್ಪ: ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರೌಢಶಾಲೆ ಕಂದಗೋಳ ವಿಧ್ಯಾರ್ಥಿನಿ
ಕು. ಐಶ್ವರ್ಯ ಅಂಬಣ್ಣಾ ರವರು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 618/
625 ಅಂಕಗಳು ಪಡೆಯುವ ಮೂಲಕ ಹುಮನಾಬಾದ ಹಾಗೂ ಚಿಟಗುಪ್ಪಾ ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ಐದನೇ ಸ್ಥಾನ ಹಾಗೂ ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದಿರುವ ಪ್ರಯುಕ್ತ ಕು.ಐಶ್ವರ್ಯ ಅಂಬಣ್ಣಾ ಹಾಗೂ ಮುಖ್ಯ ಗುರುಗಳಾದ ರೇಖಾ ಮಂಜುನಾಥ್ ರವರಿಗೆ ರಾಷ್ಟ್ರೀಯ ಬಸವ ದಳ, ಶರಣ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ತು ಗಳ ಸಂಯುಕ್ತಾಶ್ರಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ
ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜಶೇಖರ ದೇವಣಿ, ಅನಿಲಕುಮಾರ ಸಿಂದಗಿರಿ, ಬಂಡೆಪ್ಪಾ ಶೇರಿ, ಜಗನ್ನಾಥ ದೇವಣಿ, ಪ್ರವೀಣ ಕಲ್ಯಾಣಿ , ಮಂಜುನಾಥ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ
