ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೇಮರಡ್ಡಿ ಮಲ್ಲಮ್ಮ, ಸಿದ್ಧಲಿಂಗ ಶ್ರೀಗಳ ಮೂರ್ತಿ ಭವ್ಯ ಮೆರವಣಿಗೆ

ಬಾಗಲಕೋಟೆ: ತಾಲೂಕಿನ ಶಿರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾಪನೆಗೊಳ್ಳಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಲಿಂ. ಸಿದ್ಧಲಿಂಗ ಮಹಾಸ್ವಾಮಿ ಗಳವರ ಮೂರ್ತಿಗಳ ಮೆರವಣಿಗೆ ಶನಿವಾರ ವೈಭವದಿಂದ ಜರುಗಿತು.

ಮುಂಜಾನೆ ೮ ಗಂಟೆಗೆ ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸ್ಥಳೀಯ ಶಿವ ಯೋಗಾಶ್ರಮದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಗದ್ದನಕೇರಿಯ ಮಳೆರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮೂರ್ತಿಗಳ ಮೆರವಣಿಗೆಗೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.

೩೦೦ ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ, ಕೊಣ್ಣೂರಿನ ಡೊಳ್ಳುಕುಣಿತ, ಕಡಪಟ್ಟಿಯ ಜಾಂಜ್ ಪತಕ ಸೇರಿ ಅನೇಕ ಕಲಾ ತಂಡಗಳ ವಾದ್ಯ ವೈಭವಗಳೊಂದಿಗೆ ನೂತನ ಮೂರ್ತಿಗಳು ಹಾಗೂ ದೇವಸ್ಥಾನದ ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಬಾಗಲಕೋಟೆ ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತಲುಪಿತು. ಮಧ್ಯಾಹ್ನ ಸೂಳಿಭಾವಿಯ ವೆಂಕಮ್ಮ ನರಸಣ್ಣವರ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಿತು.

ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆ ಅಧ್ಯಕ್ಷ ರವಿ ಗಿರಿಜಾ, ಕಾರ್ಯಾಧ್ಯಕ್ಷ ನೀಲಪ್ಪ ಕೋಟಿಕಲ್, ಎಸ್.ಬಿ.ಮಾಚಾ, ರಂಗಪ್ಪ ಮಳ್ಳಿ, ಡಾ. ವಾಯ್. ಕೆ.ಕೋಟಿಕಲ್, ಡಾ. ನಿಂಗಪ್ಪ ನಡುವಿನಮನಿ, ನಿವೃತ್ತ ಡಿ. ವೈ. ಎಸ್‌. ಪಿ ಬಸವರಾಜ ಬಾವಲತ್ತಿ, ಸಿದ್ದಪ್ಪ ಕೋಟಿಕಲ್, ಮುತ್ತು ಹಳದೂರ, ಶೇಖರಪ್ಪ ಮಾಚಾ, ನೀಲಪ್ಪ ಬಾರಡ್ಡಿ, ಎಸ್.ಎಚ್. ಗುಲಗಂಜಿ, ಎಸ್.ಎಫ್.ಬಾರಡ್ಡಿ, ಬಸವರಾಜ ನಡುವಿ ನಮನಿ, ಎಚ್.ಬಿ.ನಾಯ್ಕಲ್, ಸೇರಿದಂತೆ ಶಿರೂರಿನ ಹಿರಿಯರು, ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ