ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು
ಬಾಗಲಕೋಟೆ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1 ರಲ್ಲಿ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಸರಕಾರಿ ಪ್ರೌಢಶಾಲೆ ತನ್ನ ಅವಿರತ ಪ್ರಯತ್ನ ದಿಂದ ಉತ್ತಮ ಫಲಿತಾಂಶ ಪಡೆದಿದೆ. ಶೇಕಡಾ 71 ರಷ್ಟು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಶಾಲೆಗೆ
ಪ್ರಥಮ ಸ್ಥಾನ ಪಡೆದಿರುವ
ಕು. ಅಮರೇಶ್ ಮಲ್ಲಯ್ಯ ಮಠ 607 ಅಂಕಗಳನ್ನು ಗಳಿಸಿ ಶೇಕಡಾ 97.12 ರಷ್ಟು ಫಲಿತಾಂಶ ಪಡೆದಿದ್ದಾನೆ. ದಿವ್ಯ ಶರಣಪ್ಪ ಮಡಿವಾಳರ,ದ್ವಿತೀಯ 605, ಮಾನಸ ಮಹಾದೇವಪ್ಪ ಕಡಿವಾಲ ತೃತೀಯ 555 ಅಂಕಗಳನ್ನು ಪಡೆದಿದ್ದಾರೆ ಈ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
- ಕರುನಾಡ ಕಂದ
